ಪೆರ್ಲ: ಕವಿ,ನಾಡೋಜ ಡಾ.ಕಯ್ಯಾರ ಕಿಂಞಣ್ಣ ರೈಗಳ ಪ್ರಖ್ಯಾತ ಕಥನ ಕಾವ್ಯಗಳಲ್ಲಿ ಒಂದಾದ "ಪಂಜರದ ಗಿಳಿ" ಎಂಬ ಸಾಹಿತ್ಯವನ್ನು ವಿಭಿನ್ನ ಪರಿಕಲ್ಪನೆಯೊಂದಿಗೆ ಗಡಿನಾಡಿಮ ಮಕ್ಕಳ ರಂಗ ತಜ್ಞರಾದ ಉದಯ ಸಾರಂಗ್ ಅವರ ನಿರ್ದೇಶನದಲ್ಲಿ ರಂಗಾವಿಷ್ಕಾರವಾಗಿ ಮೂಡಿ ಬರುತ್ತಿದೆ.
ಪಠ್ಯ ಪುಸ್ತಕಗಳಲ್ಲಿ ಅಲ್ಲದೆ ಕನ್ನಡದ ಕಥನಕಾವ್ಯದಲ್ಲಿ ಪ್ರಸಿದ್ಧಿಯಾಗಿದ್ದ ಕವಿ ಕಯ್ಯಾರರ ಈ ಸಾಹಿತ್ಯವನ್ನು ಆಯ್ದು ಇದೇ ಪ್ರಪ್ರಥಮ ಬಾರಿಗೆ ಜಿಲ್ಲೆಯ ಪ್ರಸಿದ್ಧ ಕವಿಯೋರ್ವರ ಕವಿತೆಯ ಸಾಲುಗಳು ಮನೋಜ್ಞವಾದ ರಂಗ ಅಭಿನಯದ ನಿರ್ದೇಶನದೊಂದಿಗೆ ಪ್ರಸ್ತುತಪಡಿಸಲಾಗುತ್ತದೆ. ಪೆರ್ಲದ ರಂಗ ಡಿಂಡಿಮದ ಬಾಲ ಕಲಾವಿದರಾದ ಶಾಸ್ತ ಶ್ರೀರಾಮ್, ಸಾನ್ವಿ ಬಿ,ಶ್ರೀಹರಿ,ಹರಿಪ್ರಿಯ,ತನ್ಮೈ, ಕುಶಿ ಬದಿಯಡ್ಕ, ಪುನೀತ್ ಸಾರಂಗ್, ನಂದನ್ ನಾಯಕ್ ನಲ್ಕ, ಸಮನ್ವಿ ಬಜಕೂಡ್ಲು ಅಭಿನಯಿಸಲಿದ್ದಾರೆ. ಉದಯೋನ್ಮುಖ ಗಾಯಕಿ ಮಮತ ನಲ್ಕ ಗಾನ ಪ್ರಸ್ತುತಿಗೈಯಲಿದ್ದು ರಂಗ ಡಿಂಡಿಮ ಪೆರ್ಲ ಸಂಘಟನೆ ಸಹಕಾರ ನೀಡುತ್ತಿದೆ. ನ.19ಕ್ಕೆ ಕಾಸರಗೋಡಿನ ನಾರಿ ಚಿನ್ನಾರಿ ಕಾರ್ಯಕ್ರಮದಲ್ಲಿ ಚೊಚ್ಚಲ ಪ್ರದರ್ಶನ ಕಾಣುವ ಪಂಜರದ ಗಿಳಿ ರಂಗಾವಿಷ್ಕಾರ ಬಳಿಕ ಜಿಲ್ಲೆಯ ವಿವಿದೆಡೆ ಪ್ರದರ್ಶನಕ್ಕೆ ಅಣಿಯಾಗಿದೆ ಎಂದು ತಂಡದ ಅಧ್ಯಕ್ಷರಾದ ರಾಜೇಶ್ ಬಜಕೂಡ್ಲು ತಿಳಿಸಿದ್ದಾರೆ.
ಜಾಹೀರಾತು


.jpeg)

0 Comments