ಪೆರ್ಲ: ಶೇಣಿ ಶ್ರೀಶಾರದಾಂಬ ಹೈಯರ್ ಸೆಕೆಂಡರಿ ಶಾಲೆಯ ಹೈಸ್ಕೂಲ್ ಬ್ಲೋಕ್ ಗೆ ಕುಡಿನೀರ ಶುದ್ಧಿಕರಣ ಯಂತ್ರವನ್ನು ಹಳೆ ವಿದ್ಯಾರ್ಥಿಯೋರ್ವರು ಕೊಡುಗೆಯಾಗಿ ನೀಡಿದರು.
ಬೆಂಗಳೂರಿನಲ್ಲಿ ಉದ್ಯಮಿಯಾಗಿರುವ ಸದಾನಂದ ಶೆಟ್ಟಿ ಅಲ್ಚಾರ್ ತಮ್ಮ ತಂದೆಯವರಾದ ವಿಶ್ವನಾಥ ಶೆಟ್ಟಿ ಅವರ ಸ್ಮರಣಾರ್ಥ ಈ ಕೊಡುಗೆಯನ್ನು ಶಾಲೆಗೆ ಸಮರ್ಪಿಸಿದರು.
ಶಾಲಾ ಮುಖ್ಯೋಪಾಧ್ಯಾಯ ಶ್ರೀಶ ಕುಮಾರ್ ಸಮಾರಂಭದ ಅಧ್ಯಕ್ಷತೆವಹಿಸಿದ್ದರು.
ಶಾಲಾ ಪ್ರಬಂಧಕ,ಎಣ್ಮಕಜೆ ಗ್ರಾ.ಪಂ.ಅಧ್ಯಕ್ಷ ಸೋಮಶೇಖರ್ ಜೆ.ಎಸ್,
ಯುಪಿ ಶಾಲಾ ಮುಖ್ಯೋಪಾಧ್ಯಾಯ ರಾಧಾಕೃಷ್ಣ ನಾಯಕ್ ಶೇಣಿ, ಶಾಲಾ ಪಿಟಿಎ ಅಧ್ಯಕ್ಷ ವಿಲ್ಸನ್ ಡಿ.ಸೋಜ, ಕೃಷ್ಣ ಪ್ರಸಾದ್ ಶೆಟ್ಟಿ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ದಾನಿ ಸದಾನಂದ ಶೆಟ್ಟಿ ಅವರನ್ನು ಶಾಲಾ ವತಿಯಿಂದ ಅಭಿನಂದಿಸಲಾಯಿತು.
ಶಾಲಾ ಮಕ್ಕಳು,ಶಿಕ್ಷಕ ಶಿಕ್ಷಕಿಯರು ಉಪಸ್ಥಿತರಿದ್ದರು.
ಶಾಲಾ ಶಿಕ್ಷಕ ಶ್ಯಾಮ್ ಪ್ರಸಾದ್ ಸ್ವಾಗತಿಸಿ ಮೊಹಮ್ಮದ್ ಸಿ.ಎಚ್.ವಂದಿಸಿದರು. ದಿವ್ಯ ಎಂ ಕಾರ್ಯಕ್ರಮ ನಿರೂಪಿಸಿದರು.








0 Comments