ಯಕ್ಷಗಾನ ಅಭ್ಯಾಸ ಕೇಂದ್ರ ಯುಎಇ ಕುಟುಂಬದ ಏಕ ದಿನ ವಿಹಾರ ಕೂಟ

 


ದುಬೈ : ನಗರದ ಕ್ರೀಕ್ ಪಾರ್ಕ್ ನಲ್ಲಿ ತುಳುನಾಡಿನ ಜಾನಪದ ಆಟಗಳ‌ ಆಟವನ್ನು ಆಡುತ್ತಾ ಮತ್ತು ಗ್ರಾಮೀಣ ಆಟದ ಬಗ್ಗೆ ‌ಮಕ್ಕಳಿಗೆ ಮಾಹಿತಿಯನ್ನು ನೀಡುತ್ತ ಯಕ್ಷಗಾನ ಅಭ್ಯಾಸ ಕೇಂದ್ರ ಯುಎಇ ಕುಟುಂಬದ ಸದಸ್ಯ- ಸದಸ್ಯೆಯರು ಒಂದು ದಿನ ಕಾಲ ಕಳೆದರು.

 





ನಗರದ ಊದು ಮೇತದ ಕ್ರೀಕ್ ಪಾರ್ಕಿನಲ್ಲಿ ಯಕ್ಷಗಾನ ಅಭ್ಯಾಸ ಕೇಂದ್ರ ಯುಎಇಯ ವತಿಯಿಂದ ನಡೆದ ವಿಹಾರ ಕೂಟವು ಡಿ.17 ರಂದು ಬೆಳಿಗ್ಗೆ ಎಂಟು ಗಂಟೆಯಿಂದ ಸಂಜೆ ಆರು ಗಂಟೆಯ ವರೆಗೆ ವಿವಿಧ ಜಾನಪದ ಗ್ರಾಮೀಣ ಆಟಗಳ ಮೂಲಕ ಒಂದು ದಿನದ ವಿಹಾರ ಕೂಟ ಏರ್ಪಡಿಸಿದ್ದರು.ಕೇಂದ್ರದ ನೂರಕ್ಕೂ ಅಧಿಕ ಕುಟುಂಬ ಸದಸ್ಯ- ಸದಸ್ಯೆಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕಾರ್ಯಕ್ರಮದ ಯಶಸ್ವಿಗೆ ಸಾಥ್ ನೀಡಿದರು.ಲಿಂಬು ಚಮಚ, ಲಗೋರಿ,ಹಗ್ಗಜಗ್ಗಟ ಹಾಗೂ ಇನ್ನಿತರ ಗ್ರಾಮೀಣ ಆಟಗಳು ಮನರಂಜಿಸಿದವು.ತುಳುನಾಡಿನ ಶೈಲಿಯ ಭೋಜನದ ಸವಿಯನ್ನು ಉಣಬಡಿಸಿದರು.

 





ಕೇಂದ್ರದ ಗುರುಗಳಾದ ಶೇಖರ್ ಡಿ.ಶೆಟ್ಟಿಗಾರ್, ಸಂಚಾಲಕರಾದ ದಿನೇಶ್ ಶೆಟ್ಟಿ ಕೊಟ್ಟಿಂಜ, ಶ್ರೀಮತಿ ಆರತಿ ದಿನೇಶ್ ಶೆಟ್ಟಿ, ಪ್ರಕಾಶ್ ಪಕ್ಕಳ, ಗಿರೀಶ್ ನಾರಾಯಣ್ ಶ್ರೀಮತಿ ಸಮಂತಾ ಗಿರೀಶ್, ಶ್ರೀಮತಿ ದಿವ್ಯ ಪ್ರಕಾಶ್ ಪಕಳ,ವಸಂತ ಶೆಟ್ಟಿ, ಹಿರಿಯ ಕಲಾವಿದರಾದ ಪ್ರಭಾಕರ ಸುವರ್ಣ,ಸಂದೀಪ್ ಶೆಟ್ಟಿ, ವಿಕೇಶ್ ಶೆಟ್ಟಿ, ಶರತ್ ಕುಡ್ಲ ಆಟೋಟ ಕಾರ್ಯಕ್ರಮಗಳ ಸಂಯೋಜನೆ  ಮಾಡಿದರು.

      ಕೊನೆಗೆ ಕೇಂದ್ರದ ಸದಸ್ಯರಾದ ಪ್ರಕಾಶ್ ಪಕಳರ ಹುಟ್ಟು ಹಬ್ಬದ ಕೇಕ್ ನ್ನು ಕತ್ತರಿಸಿ ಶುಭವನ್ನು ಹಾರೈಸುವ ಮೂಲಕ ಕಾರ್ಯಕ್ರಮ ಮುಕ್ತಾಯಗೊಂಡಿತು.

Post a Comment

0 Comments