ಮಂಗಳೂರು : ಕಲ್ಕೂರ ಪ್ರತಿಷ್ಠಾನದ ವತಿಯಿಂದ ಹರಿಪಾದಗೈದ ಪೇಜಾವರ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯವರ ಸಂಸ್ಮರಣಾರ್ಥ ನಡೆದ ಪೇಜಾವರ ವಿಶ್ವೇಶತೀರ್ಥ ನಮನ ಕಾರ್ಯಕ್ರಮದಲ್ಲಿ ಪ್ರತಿಷ್ಠಿತ ಪೇಜಾವರ ವಿಶ್ವೇಶತೀರ್ಥ ಜೀವಮಾನ ಸಾಧನಾ ಪ್ರಶಸ್ತಿಯನ್ನು ಯು ಎ ಇ ಯ ಹಿರಿಯ ಸಮಾಜಸೇವಕ
ಕಲಾ ಪೋಷಕ ಜೋಸೆಫ್ ಮಾತಿಯಾಸ್,ಯುಎಇಯ ಕೆ.ಐ.ಸಿ.ಯ ಅಧ್ಯಕ್ಷ ಹಾಗೂ ಹಿರಿಯ ಶಿಕ್ಷಣ ಪ್ರೇಮಿ
ಅಶ್ರಫ್ ಶಾ ಮನ್ತೂರುರವರನ್ನು ಪೇಜಾವರ ಅಧೋಕ್ಷಜ ಮಠಾಧಿಪತಿ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಪ್ರಧಾನಿಸಿದರು ಸಮಾರಂಭದಲ್ಲಿ ಶ್ರೀ ಶ್ರೀ ವೇಧವರ್ಧನ ತೀರ್ಥ ಶ್ರೀಪಾದರು ಶಿರೂರು ಮಠ, ಶ್ರೀ ಶ್ರೀ ವಿದ್ಯೇ0ದ್ರ ತೀರ್ಥ ಶ್ರೀಪಾದರು ಚಿತ್ರಾಪುರ ಮಠ, ಮಂಗಳೂರು ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಡಾ ಎಂ ಮೋಹನ್ ಆಳ್ವ, ಶಾಸಕ ವೇಧವ್ಯಾಸ ಕಾಮತ್, ಸಾಹಿತಿ ಡಾ. ಲಕ್ಷ್ಮೀಶ ತೋಲ್ಪಾಡಿ, ಕಟೀಲು ಹರಿ ನಾರಾಯಣ ದಾಸ ಅಸ್ರಣ್ಣ ಮುಂತಾದವರು ಉಪಸ್ಥಿತರಿದ್ದರು
0 Comments