ದುಬೈ : ಯು.ಎ.ಇ.ಯಾ ಅಜ್ಮಾನ್ ಮಾಲೀಕ್ ಗ್ರೌಂಡ್ ನಲ್ಲಿ ಜನವರಿ 28 ರಂದು ನಡೆಯುವ "ಕಟೀಲು ಪ್ರೀಮಿಯರ್ ಲೀಗ್ - 2024 (KPL-2024)" ಇದರ ಹತ್ತು ಮಾಲಕರ ಹತ್ತು ತಂಡಗಳ ಆಟಗಾರರ ಬಿಡ್ಡಿಂಗ್ ಹಾಗೂ ಶಾಶ್ವತ ಫಲಕದ ಅನಾವರಣ ಕಾರ್ಯಕ್ರಮ ಇತ್ತೀಚೆಗೆ ದುಬೈಯ ಬಿ.ಟೌನ್ ರೆಸ್ಟೋರೆಂಟ್ ನಲ್ಲಿ ಜರಗಿತು.
ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮ ಆರಂಭಗೊಂಡಿತು. ಮುಖ್ಯ ಅತಿಥಿಗಳಾಗಿ ಬಾರ್ಲಿ ಗ್ರೂಪ್ಸ್ ನ ಮಾಲಕರಾದ ಅಭಿ ಶೆಟ್ಟಿ, ರೇಂಜರ್ ಟ್ರಾನ್ಸ್ ಪೋರ್ಟ್ ನ ಮಾಲಕರಾದ ಉದಯ ಶೆಟ್ಟಿ,ವಿಡೋನ್ ನ ವಿದ್ಯಾನಂದ ಶೆಟ್ಟಿ, ಬಿ.ಟೌನ್ ನ ಮಾಲಕರಾದ ಹರಿ ಪ್ರಸಾದ್ ಶೆಟ್ಟಿ, ಸುರೇಶ್ ಆಚಾರ್ಯ, ಪ್ರಕಾಶ್ ಪಕಳ,ನಿತೇಶ್ ಶೆಟ್ಟಿ ಫೈಝಲ್,ಶಾಫಿ,ಶರತ್ ಶೆಟ್ಟಿ ಉಪಸ್ಥಿತರಿದ್ದರು. ಅತಿಥಿಗಳು ಶಾಶ್ವತ ಫಲಕವನ್ನು ಅನಾವರಣಗೊಳಿಸಿ ಜನವರಿ 28 ರಂದು ನಡೆಯುವ ಕ್ರಿಕೆಟ್ ಪಂದ್ಯಾಟಕ್ಕೆ ಶುಭವನ್ನು ಹಾರೈಸಿದರು.
ಕಟೀಲು ಫ್ರೆಂಡ್ಸ್ ನ ಎಲ್ಲಾ ಪದಾಧಿಕಾರಿಗಳು ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಕಾರ್ಯಕ್ರಮದ ಯಶಸ್ವಿಗೆ ಸಾಥ್ ನೀಡಿದರು.
ತನ್ವೀರ್ ಖಾಜಿ ಫರ್ವೇಜ್ ರವರ ಮಾಲೀಕತ್ವದ Naveen XI,ಶರತ್ ಶೆಟ್ಟಿಯವರ ಮಾಲಕತ್ವದ ಅರಸ ವಾರಿಯರ್ಸ್, ಉದಯ ಶೆಟ್ಟಿಯವರ ಮಾಲಕತ್ವದ ರೇಂಜರ್ಸ್,ಅನೀಶ್ ರವರ ಮಾಲಕತ್ವದ ದುಬೈ ಇಂಡಿಯನ್ಸ್,ದೀಪಕ್ ಎಸ್.ಪಿ.ಯವರ ಮಾಲಕತ್ವದ ಕರ್ಮಾರ್ ಡಿಜೆ ಚಾಲೆಂಜರ್ಸ್,ದಿನೇಶ್ ಶೆಟ್ಟಿ ಕೊಟ್ಟಿಂಜರವರ ಮಾಲಕತ್ವದ ಯಕ್ಷ ಯೋಧಸ್,ರಮೇಶ್ ರವರ ಮಾಲಕತ್ವದ ಕರಾವಳಿ ಅಟೋ,ಪ್ರವೀಣ್ ಶೆಟ್ಟಿಯವರ ಮಾಲಕತ್ವದ ವರಾಹ ರೂಪ ಮಂಗಳೂರು, ಪ್ರಶಾಂತ್ ರವರ ಮಾಲಕತ್ವದ ದುಬೈ ದಾಬ ಕ್ರಿಕೆಟರ್ಸ್,ವಿದ್ಯಾನಂದ ಶೆಟ್ಟಿಯವರ ಮಾಲಕತ್ವದ ವಿಡೋ ವನ್ ತಂಡಗಳು ಜನವರಿ 28 ರಂದು ಅಜ್ಮಾನ್ ಮೈದಾನದಲ್ಲಿ ಆಡಲಿದ್ದು ವಿಜಯದ ಮಾಲೆ ಯಾರ ಹೆಗಲಿಗೆ ಎಂಬ ನಿರೀಕ್ಷೆಯಲ್ಲಿ ಯುಎಇಯ ಕ್ರಿಕೆಟ್ ಅಭಿಮಾನಿಗಳದ್ದಾಗಿದೆ.




0 Comments