ದುಬೈ : ದುಮೆಖ್ (Dumec) ಸಂಸ್ಥೆಯ ಪ್ರಾಯೋಜಕತ್ವದಲ್ಲಿ ಯಕ್ಷ ಯೋಧಸ್ ನ ಮೂರನೇ ವರ್ಷದ ಯಕ್ಷ ಪ್ರೀಮಿಯರ್ ಲೀಗ್-2024 (YPL -2024) ಕ್ರಿಕೆಟ್ ಪಂದ್ಯಾಟವು ಫೆಬ್ರವರಿ 25 ರಂದು ಅಜ್ಮಾನ್ ನ ಒವಲ್ ಗ್ರೌಂಡ್ ನಲ್ಲಿ ಬೆಳಿಗ್ಗೆ 8.30 ರಿಂದ ನಡೆಯಲಿದೆ. ಇದರ YPL ಟ್ರೋಫಿ,ಟೂರ್ನಮೆಂಟ್ ಫಿಕ್ಸರ್ಸ್ ಹಾಗೂ ಸಮವಸ್ತ್ರ ಬಿಡುಗಡೆ ಕಾರ್ಯಕ್ರಮವು ಇತ್ತೀಚೆಗೆ ನಗರದ ಕ್ಯಾಪಿಟಲ್ ನ ಬಿ.ಟೌನ್ ಹೋಟೆಲ್ ನಲ್ಲಿ ಜರಗಿತು.
ಕ್ರಿಕೆಟ್ ಟೂರ್ನಮೆಂಟ್ ನಲ್ಲಿ ಆಡಲಿರುವ ಹತ್ತು ತಂಡಗಳ ಮಾಲಕರು ಹಾಗೂ ನಾಯಕರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ನಂತರ ಹತ್ತು ತಂಡಗಳ ಸಮವಸ್ತ್ರ,ಪಂದ್ಯಾಟದ ಫಿಕ್ಸರ್ಸ್(Fixtures) ಬಿಡುಗಡೆಗೊಳಿಸಲಾಯಿತು.ಮತ್ತು YPL-2024 ಟೂರ್ನಮೆಂಟ್ ನ ಟ್ರೋಫಿಯನ್ನು ಅನಾವರಣಗೊಳಿಸಲಾಯಿತು.
ಯಕ್ಷ ಯೋಧಸ್ ನ ಸಂಸ್ಥೆಯ ಪದಾಧಿಕಾರಿಗಳದ ದಿನೇಶ್ ಶೆಟ್ಟಿ ಕೊಟ್ಟಿಂಜ,ಸಂದೀಪ್ ಶೆಟ್ಟಿ, ಬಾಲಕೃಷ್ಣ ಶೆಟ್ಟಿ,ಗಗನ್ ಶೆಟ್ಟಿ, ಪ್ರಖ್ಯತ್ ಶೆಟ್ಟಿ,ವಿಕ್ಕಿ ಶೆಟ್ಟಿ,ವಸಂತ ಶೆಟ್ಟಿ, ಜಯನಂದ ಪಕಳ,ಬಾಲಕೃಷ್ಣ ಶೆಟ್ಟಿಗಾರ್,ಕೌಶಿಕ್ ಶೆಟ್ಟಿ,ಪ್ರಥಿತ್,ಜೀವನ್ ಶೆಟ್ಟಿ ಉಪಸ್ಥಿತರಿದ್ದರು.ಶಿವಪ್ರಸಾದ್ ಕಾರ್ಯಕ್ರಮವನ್ನು ನಿರೂಪಿಸಿದರು.ದಿನೇಶ್ ಶೆಟ್ಟಿ ಕೊಟ್ಟಿಂಜ ಸ್ವಾಗತಿಸಿ ಧನ್ಯವಾದವಿತ್ತರು.
ಫೆಬ್ರವರಿ 25 ರಂದು ಅಜ್ಮನ್ ನ ಕ್ರೀಡಾಂಗಣದಲ್ಲಿ ನಡೆಯಲಿರುವ ಕ್ರಿಕೆಟ್ ಟೂರ್ನಮೆಂಟ್ ನಲ್ಲಿ ಹತ್ತು ತಂಡಗಳಾದ ವಿದವರ್ ಬಾಯ್ಸ್, ಟೀಮ್ ಎಲಿಗೆಂಟ್ ಮಂಗಳೂರು,ಕಟೀಲ್ ಫ್ರೆಂಡ್ಸ್,ಶ್ರೀ ಕಟೀಲ್,ಫ್ರೆಂಡ್ಸ್ ಉಡುಪಿ,ಯಕ್ಷ ಯೋಧಸ್ A,ಯಕ್ಷ ಯೋಧಸ್ B,ಸೀ.ಬಾಯ್ಸ್,ಗಹನ್ ಮಂಗಳೂರು ರಾಕರ್ಸ್,ಡೀಜೆ ನವೀನ್ ಮಂಗಳೂರು ಆಡಲಿದ್ದು ಗೆಲುವು ಯಾರ ಪಾಲಿಗೆ ಒಲಿಯಲಿದೆ ಎಂದು ಯುಎಇಯ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಯಾಗಿದೆ.
🖋️ ವಿಜಯಕುಮಾರ್ ಶೆಟ್ಟಿ ಗಾಣದಮೂಲೆ ಮಜಿಬೈಲ್ (ದುಬೈ)
Add







0 Comments