ಪೆರ್ಲದಲ್ಲಿ 40 ಲಕ್ಷರೂ ಮೌಲ್ಯದ ಭಾರಿ ಪ್ರಮಾಣದ ಗಾಂಜಾ ಸಾಗಿಸುತ್ತಿದ್ದ ಪಿಕಪ್ ಆರೋಪಿಗಳ ಸಮೇತ ಅಬಕಾರಿ ಇಲಾಖೆ ಬಲೆಗೆ


 ಪೆರ್ಲ :    ಪಿಕಪ್ ವಾಹನ ಮೂಲಕ ಕೊಂಡೊಯ್ಯುತ್ತಿದ್ದ ಭಾರಿ ಪ್ರಮಾಣದ ಗಾಂಜಾ ಸಹಿತ ಇಬ್ಬರು ಆರೋಪಿಗಳನ್ನು ಅಬಕಾರಿ ಇಲಾಖೆ ವಿಶೇಷ ತನಿಖಾ ದಳದ ಅಧಿಕಾರಿಗಳು ರವಿವಾರ ರಾತ್ತಿ 10 ಗಂಟೆಗೆ ಪೆರ್ಲದ  ಮಾರಾಟ ತೆರಿಗೆ ಚೆಕ್ ಪೋಸ್ಟ್ ಬಳಿಯಿಂದ  ಬಂದಿಸಿದ್ಧಾರೆ. 


KL 14AC0211 ನಂಬ್ರದ ಪಿಕಪ್ ವಾಹನದಲ್ಲಿ ಸಾಮಾಗ್ರಿ ಮಾರಾಟ ರೂಪದಲ್ಲಿ ಪ್ಯಾಕೆಟ್ ಗಳನ್ನಾಗಿಸಿ ಬಂದೋಬಸ್ತ್ ನಡೆಸಿ ಇಬ್ಬರು ಗಾಂಜಾ ಸಾಗಿಸುತ್ತಿದ್ದರು. ಖಚಿತ ಮಾಹಿತಿ ಅರಿತ ಎಕ್ಸೈಸ್ ಎನ್ಪೋರ್ಸ್ ಮೆಂಟ್ ನಾರ್ಕೋಟಿವ್ ಸ್ಪೇಶಲ್ ಸೆಲ್ ಸಿಐ ಅಮಲ್ ರಾಜ್,ಡಿಸಿ ಜಯರಾಜ್, ಸಾಜನ್,ಪ್ರಜೀತ್,ಮಂಜುನಾಥ್, ಸಂದೇಶ್ ಆರೋಪಿಗಳನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ‌. ಸುಮಾರು 40 ಲಕ್ಷರೂ ಬೆಲೆ ಬಾಳುವ ಗಾಂಜಾ ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ.

Post a Comment

0 Comments