ಕಡಲ‌ನಗರಿಯಲ್ಲಿ ಜಾನಪದ ಗೀತೆಯ ಕಲರವದೊಂದಿಗರ ಕನ್ನಡಿಗರನ್ನು ರಂಜಿಸಿದ ವಿಶ್ವಕನ್ನಡ ಸಂಸ್ಕೃತಿ ಸಮ್ಮೇಳನ

 


ದುಬೈ : ಹೃದಯವಾಹಿನಿ ಕರ್ನಾಟಕ ಮಂಗಳೂರು ಹಾಗೂ ಸೆಂಟ್ (SCENT) ಸಾಂಸ್ಕೃತಿಕ ಸಂಸ್ಥೆ ಯುಎಇಯ ಜಂಟಿ ಆಶ್ರಯದಲ್ಲಿ ನಡೆದ 17 ನೇ ವಿಶ್ವಕನ್ನಡ ಸಂಸ್ಕೃತಿ ಸಮ್ಮೇಳನ ಫೆಬ್ರವರಿ ಹದಿನೆಂಟರಂದು ನಗರದ ಫಾರ್ಚೂನ್ ಪ್ಲಾಝ ಹೋಟೆಲ್ ನ ಸಭಾಂಗಣದಲ್ಲಿ ಅದ್ದೂರಿಯಾಗಿ ನಡೆದುದಲ್ಲದೆ

 ಕರ್ನಾಟಕದ ಹಳೆಯ ಜಾನಪದ ಗೀತೆಗಳೊಂದಿಗೆ ಕುಣಿದು ಕುಪ್ಪಳಿಸುವಂತಾಗಿಸಿತು.


ಕರ್ನಾಟಕದಿಂದ ಮೂವತ್ತಕ್ಕೂ ಕಲಾವಿದರ ತಂಡವು ದುಬೈಗೆ ಆಗಮಿಸಿ ಜಾನಪದ ನೃತ್ಯ, ಕನ್ನಡ ಗೀತೆಗಳು ಹಾಗೂ ವ್ಯವಿಧ್ಯಮಯ ಮನರಂಜನೆಯ ಕಾರ್ಯಕ್ರಮಗಳು ಯಶಸ್ವಿಯಾಗಿ ಜರಗಿತು.

 


   ಕಾರ್ಯಕ್ರಮದ ಉದ್ಘಾಟನೆಯನ್ನು ಲೆಫ್ಟಿನೆಂಟ್ ಜನರಲ್ ಅಂಬ್ಯಾಸಿಡರಾದ‌ ಡಾ. ಡೆವಿಡ್ ಪ್ರ್ಯಾಂಕ್ ಫೆರ್ನಾಂಡೀಸ್ ರವರು ಉದ್ಘಾಟಿಸಿದರು.ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷರಾದ ಸರ್ವೋತ್ತಮ ಶೆಟ್ಟಿಯವರು ವಹಿಸಿದರು.ವಿಶೇಷ ಅತಿಥಿಗಳಾಗಿ ಈಡನ್ ಗ್ಲೋಬಲ್ ಶಾಲೆಯ ಅಧ್ಯಕ್ಷರಾದ ಅಶ್ರಫ್ ಶಾ ಮಂತೂರು,ವೀರಶೈವ ಲಿಂಗಾಯತ ಸಮಾಜ ಯುಎಇಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಗೌಡರವರು ಉಪಸ್ಥಿತರಿದ್ದು ಕಾರ್ಯಕ್ರಮದ ಬಗ್ಗೆ ಶ್ಲಾಘನೀಯ ಭಾಷಣ ಮಾಡಿ ಕಾರ್ಯಕ್ರಮಕ್ಕೆ ಶುಭವನ್ನು ಹಾರೈಸಿದರು.

ವಿಶ್ವಮಾನ್ಯ ಕನ್ನಡಿಗ ಪ್ರಶಸ್ತಿ:

 




17 ನೇ ಕನ್ನಡ ಸಂಸ್ಕೃತಿ ಸಮ್ಮೇಳನದ ವತಿಯಿಂದ ಕೂಡ ಮಾಡುವ "ವಿಶ್ವಮಾನ್ಯ ಕನ್ನಡಿಗ" ಪ್ರಶಸ್ತಿಯನ್ನು ಎಳು ಮಂದಿ ಸಾಧಕರಿಗೆ ನೀಡಿ‌ ಗೌರವಿಸಲಾಯಿತು.


ಇಂಡಿಯಾ ಸೋಷಿಯಲ್ ಅಂಡ್ ಕಲ್ಚರಲ್ ಸೆಂಟರ್ ಅಬುಧಾಬಿಯ‌ ನಿಕಟಪೂರ್ವ ಗೌರವ ಉಪಾಧ್ಯಕ್ಷರಾದ ಮಿತ್ರಂಪಾಡಿ ಜಯರಾಮ್ ರೈ,ಸಮಾಜ ಸೇವಕರಾದ ಯೂನೂಸ್ ಖಾಝಿಯ ಬಟ್ಕಳ,ಅಂತರಾಷ್ಟ್ರೀಯ ಜಾನಪದ ಗಾಯಕರಾದ ಗೋ.ನಾ.ಸ್ವಾಮಿ,ಸಮಾಜ ಸೇವಕರಾದ ಟಿ.ವಿ.ಬಾಬು,ಮಹಮ್ಮದ್ ಆಸೀಫ್ ಕುಂದಾಪುರ, ಇಫ್ತಿಯಾಕ್ ಹಸನ್ ರುಕ್ಬದ್ದೀನ್,ಕೆ.ನಾಗರಾಜ,ಕೆ.ಎನ್.ನಾಗೇಶ್ ರವರಿಗೆ‌ ಯುಎಇಯ ಕನ್ನಡಿಗರ ಹಾಗೂ ಗಣ್ಯತಿ ಗಣ್ಯರ ಸಮ್ಮುಖದಲ್ಲಿ ನೀಡಿ ಗೌರವಿಸಲಾಯಿತು.ವಿಶ್ವಕನ್ನಡ ಸಂಸ್ಕೃತಿ ಸಮ್ಮೇಳನದ ಅಧ್ಯಕ್ಷರಾದ ಕೆ.ಪಿ.ಮಂಜುನಾಥ ಸಾಗರ್ ಪ್ರಾಸ್ತಾವಿಕ ಭಾಷಣ ಮಾಡಿ ಹದಿನೇಳನೆಯ ವಿಶ್ವಕನ್ನಡ ಸಂಸ್ಕೃತಿ ಸಮ್ಮೇಳನದ ಬಗ್ಗೆ ತಿಳಿ ಹೇಳಿದ್ದರು.ಅತಿಥಿಗಳಾದ ಡಾ. ಡೆವಿಡ್ ಪ್ರ್ಯಾಂಕ್ ಫೆರ್ನಾಂಡೀಸ್ ಹಾಗೂ ಸರ್ವೋತ್ತಮ ಶೆಟ್ಟಿಯವರು ಮಾತನಾಡುತ್ತಾ ಇಂತಹ ಸಂಸ್ಕೃತಿ ಸಮ್ಮೇಳನಗಳು ನಡೆದರೆ ಅಳಿವಿನ ಅಂಚಿನಲ್ಲಿರುವ ನಮ್ಮ ಜಾನಪದ ಕಲೆಗಳಿಗೆ ಮರುಜೀವ ನೀಡುವಂತೆ ಆಗುತ್ತದೆ ಹಾಗೂ  ಒಳ್ಳೆಯ ಜಾನಪದ ಕಲಾವಿದರಿಗೆ ಒಂದು ವೇದಿಕೆ ನಿರ್ಮಾಣ ಮಾಡುವಂತಾಗುತ್ತದೆ.ಇಂತಹ ಸಮ್ಮೇಳನಗಳು ನಡೆಯುತ ಇರಲಿ‌ ಎಂದು ಕಲಾವಿದರಿಗೆ ಹಾರೈಸಿ ಕಾರ್ಯಕ್ರಮಕ್ಕೆ ಶುಭವನ್ನು ಹಾರೈಸಿದರು.ಕೆ ನಾಗರಾಜ್, ಕೆಎನ್ ನಾಗೇಶ್, ಟಿವಿ ಬಾಬು ,ಮೋಹನ್ ಕುಮಾರ್,ಉದ್ಯಮಿ ವಾಸು ರಾಜು ದುಬೈ ಉಪಸ್ಥಿತರಿದ್ದರು.

     ಮನರಂಜಿನೆ ನೀಡಿದ ಜಾನಪದ ನೃತ್ಯ, ಡೊಳ್ಳು ಕುಣಿತ, ಜಾನಪದ ಹಾಡುಗಾರರಿಗೆ ಮತ್ತು ಮಾಧ್ಯಮ ವರದಿಗಾರರಾದ ವಿಜಯಕುಮಾರ್ ಶೆಟ್ಟಿ ಗಾಣದಮೂಲೆ ಮಜಿಬೈಲ್ ದುಬೈ ಹಾಗೂ ಯೂಟ್ಯೂಬರ್ ಸಂತೋಷ್ ಪೊಳಲಿಯವರನ್ನು   ಸ್ಮರಣಿಕೆ ಹಾಗೂ ಸರ್ಟಿಫಿಕೇಟ್ ನೀಡಿ ಗೌರವಿಸಲಾಯಿತು.

    ಸೆಂಟ್ ಸಾಂಸ್ಕೃತಿಕ ಸಂಸ್ಥೆ ಯುಎಇಯ ಅಧ್ಯಕ್ಷರಾದ ಶೋಧನ್ ಪ್ರಸಾದ್ ಅತ್ತವಾರ ಸ್ವಾಗತಿಸಿ ಅಂತರಾಷ್ಟ್ರೀಯ ಜಾನಪದ ಗಾಯಕರಾದ ಗೋ.ನಾ.ಸ್ವಾಮಿ ನಿರೂಪಿಸಿ ಧನ್ಯವಾದವಿತ್ತರು.

🖋️ವಿಜಯಕುಮಾರ್ ಶೆಟ್ಟಿ ಗಾಣದಮೂಲೆ ಮಜಿಬೈಲ್ (ದುಬೈ)

(+971552032097)


Add


Post a Comment

0 Comments