ಮಂಜೇಶ್ವರ : ಹಲವು ವರ್ಷಗಳಿಂದ ಹಿಂದೂ ಧರ್ಮ ಶ್ರದ್ಧಾ ಕೇಂದ್ರದ ಉತ್ಸವ ಸಂದರ್ಭ ಹಿತಮಿತವಾದ ಬೆಲೆಯಲ್ಲಿ ಧ್ವನಿ ಮತ್ತು ಬೆಳಕಿನ ವ್ಯವಸ್ಥೆ ಮಾಡುತ್ತಿದ್ದ ಸಂಸ್ಥೆಯ ಮಾಲೀಕರೋರ್ವರನ್ನು ಅತಿಥ್ಯಾದರದಿಂದ ವೇದಿಕೆಗೆ ಕರೆಯಿಸಿ ಗಣ್ಯರ ಸಮ್ಮುಖದಲ್ಲಿ ಗುರುತಿಸಿ ಗೌರವಿಸಿ ಸೌಹರ್ದತೆಯನ್ನು ಮತ್ತೊಮ್ಮೆ ಸಾರಿ ಹೇಳಿದರೆ ಹಿಂದೂ ಧರ್ಮ ಕ್ಷೇತ್ರದಲ್ಲಿ ಸನ್ಮಾನ ಸ್ವೀಕರಿಸಿದ ಝಮ್ ಝಮ್ ಸೌಂಡ್ಸ್ ನ ಮಾಲಕರಾದ ಬಶೀರ್ ಮೂಡಂಬೈಲ್ ರಲ್ಲಿ ಅವರ್ಣನೀಯ ಅನಂದಭಾಷ್ಪಾ ನಲಿದಾಡುತ್ತಿತ್ತು.
ಹೀಗೊಂದು ಅಪರೂಪದ ಸನ್ಮಾನಕ್ಕೆ ಸಾಕ್ಷಿಯಾದುದು
ಬಲ್ಲಂಗುಡೇಲು ಶ್ರೀ ಪಾಡಾಂಗರೆ ಭಗವತೀ ಕ್ಷೇತ್ರದ ಬ್ರಹ್ಮಕಲಶೋತ್ಸವದ ವೇದಿಕೆ.
ಇಲ್ಲಿನ ಕಳಿಯಾಟ ಮಹೋತ್ಸವ ಹಾಗೂ ಇನ್ನಿತರ ಉತ್ಸವ ಕಾರ್ಯಕ್ರಮಗಳಿಗೆ ಚಿಕ್ಕ ಮೊತ್ತದಲ್ಲಿ ಲೈಟಿಂಗ್ಸ್ ಸೌಂಡ್ಸ್ ನ ವ್ಯವಸ್ಥೆಯನ್ನು ಪ್ರಾಮಾಣಿಕವಾಗಿ ಮಾಡುತ್ತಿದ್ದ ಝಮ್ ಝಮ್ ಸೌಂಡ್ಸ್ ನ ಮಾಲಕರಾದ ಬಶೀರ್ ಮೂಡಂಬೈಲ್ ರವರನ್ನು ಕ್ಷೇತ್ರದ ಪುನ ಪ್ರತಿಷ್ಠ ಬ್ರಹ್ಮಕಲಶೋತ್ಸವ ಎರಡನೇಯ ದಿನವಾದ ಇಂದು(ಫೆ.25) ನಡೆದ ಸಭಾ ಕಾರ್ಯಕ್ರಮದಲ್ಲಿ ಆರ್ಶಿವಚನ ಮಾಡಲು ಬಂದಂತ ಪರಮಪೂಜ್ಯ ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯ ಹಸ್ತದಿಂದ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಜಯಪ್ರಕಾಶ್ ತೊಟ್ಟೆತೋಡಿ,ಪ್ರಭಾಕರ ಚೌಟ ದರ್ಬೆ,ಕಿರಣ್ ಕುಮಾರ್ ಸುಲಾಯ,ಸದಾಶಿವ ಉಳ್ಳಾಲ,ರಾಘವೇಂದ್ರ ರಾವ್ ಮೂಡಂಬೈಲ್, ಕಾಸರಗೋಡು ಜಿಲ್ಲಾ ಪಂ. ಸದಸ್ಯೆ ಕಮಲಾಕ್ಷಿ, ಜೀರ್ಣೋದ್ಧಾರ ಸಮಿತಿಯ ಕಾರ್ಯಧ್ಯಕ್ಷರಾದ ರವೀಂದ್ರ ಶೆಟ್ಟಿ ಕರಿಬೈಲ್, ಸೇವಾ ಸಮಿತಿಯ ಅಧ್ಯಕ್ಷರಾದ ಜಯರಾಮ ಬಲ್ಲಂಗುಡೇಲು,ಜೀರ್ಣೋದ್ಧಾರ ಸಮಿತಿಯ ಕಾರ್ಯದರ್ಶಿ ಜಗದೀಶ್ ಮೂಡಂಬೈಲ್,ಕ್ಷೇತ್ರದ ಪೂಜಾರಿಗಳಾದ ನಾರಾಯಣ ಭಗವತೀ ಪೂಜಾರಿ ಉಪಸ್ಥಿತರಿದ್ದರು. ಶೇಖರ ಎಂ.ಸೊಯಿಪಕಲ್ಲ್ ಸ್ವಾಗತಿಸಿ ರಾಮಚಂದ್ರ ಕೋರಿಕ್ಕಾರ್ ವಂದಿಸಿದರು.
ವರದಿ : ವಿಜಯ ಕುಮಾರ್ ಶೆಟ್ಟಿ ಗಾಣದಮೂಲೆ ಮಂಜೇಶ್ವರ



0 Comments