ಪೆರ್ಲ : ಪೇಟೆಯ ವಿನಾಯಕ ಸ್ಟೋರ್ ಮಾಲಕ ಶ್ರೀರಾಮ್ ಭಟ್ ಪಳ್ಳತಮೂಲೆ (52) ಅವರ ಮೃತದೇಹ ಮನೆ ಸಮೀಪದ ತೋಟದ ಕೆರೆಯಲ್ಲಿ ಗುರುವಾರ ರಾತ್ರಿ ಪತ್ತೆಯಾಗಿದೆ.
ಹಲವಾರು ವರ್ಷಗಳಿಂದ ವ್ಯಾಪಾರಿಯಾಗಿದ್ದು ಜನಾನುರಾಗಿಯಾಗಿದ್ದ ಶ್ರೀರಾಮ ಭಟ್ಟರು ಅಲ್ಪಕಾಲದಿಂದ ತೀವ್ರ ಖಿನ್ನತೆಯಿಂದ ಬಳಲುತ್ತಿದ್ದು ಅಂಗಡಿ ಸರಿಯಾಗಿ ತೆರಯುತ್ತಿರಲಿಲ್ಲ ಎಂದು ಇವರ ಆಪ್ತರು ಇದೀಗ ತಿಳಿಸುತ್ತಿದ್ದು ಕಳೆದೆರಡು ವಾರಗಳ ಹಿಂದೆ ಮನೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆತ್ನಿಸಿದ್ದರು ಎಂದು ತಿಳಿದು ಬಂದಿದೆ ತಕ್ಷಣ ಅಂದು ಆಸ್ಪತ್ರೆಗೆ ದಾಖಲಿಸಿದ ಕಾರಣ ಪ್ರಾಣಾಪಾಯದಿಂದ ಪಾರಾಗಿದ್ದರು. ಇದೀಗ ಇಂದು ಮಧ್ಯಾಹ್ನ ಊಟದ ಬಳಿಕ ಮನೆಯಿಂದ ಇವರು ನಾಪತ್ತೆಯಾಗಿದ್ದರು.ಮನೆಯರ ಹುಡುಕಾಟದ ಬಳಿಕ ತೋಟದ ಕೆರೆಯಲ್ಲಿ ಇವರ ಮೃತದೇಹ ಪತ್ತೆಯಾಗಿತ್ತು. ಶವವನ್ನು ಪಂಚೆನಾಮೆಗಾಗಿ ಕಾಸರಗೋಡು ಜನರಲ್ ಆಸ್ಪತ್ರೆಗೆ ಕೊಂಡೊಯ್ಯಲಾಗಿದ್ದು ಬದಿಯಡ್ಕ ಪೋಲಿಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.ಇವರು ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ ಸದಸ್ಯರಾಗಿ,ಮಾಜಿ ಕೋಶಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು.
ಜಾಹೀರಾತು



0 Comments