ಪುತ್ತಿಗೆ : ಅಂಗಡಿಮೊಗರು ಸಮೀಪದ ದೇಲಂಪಾಡಿ ಶ್ರೀಮಹಾಲಿಂಗೇಶ್ವರ ಕ್ಷೇತ್ರದಲ್ಲಿ ವಾರ್ಷಿಕ ಶಿವರಾತ್ರಿ ಮಹೋತ್ಸವ ಬ್ರಹ್ಮಶ್ರೀ ದೇಲಂಪಾಡಿ ಗಣೇಶ ತಂತ್ರಿಗಳ ನೇತೃತ್ವದಲ್ಲಿ ಮಾ.7ರಿಂದ 9ರವರೆಗೆ ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಲಿದೆ. ಇದರ ಅಂಗವಾಗಿ ಮಾ.7ಕ್ಕೆ ಬೆಳಗ್ಗೆ 7 ಗಂಟೆಗೆ ಪ್ರಾರ್ಥನೆ,ಗಣಪತಿ ಹೋಮ,ಮಧ್ಯಾಹ್ನ 3 ಗಂಟೆಯಿಂದ ಹಸಿರುವಾಣಿ ಹೊರೆ ಕಾಣಿಕೆ ಮೆರವಣಿಗೆ, ಸಂಜೆ 7ರಿಂದ ಊರ ಪ್ರತಿಭೆಗಳ ಸಾಂಸ್ಕೃತಿಕ ವೈವಿಧ್ಯಮಯ ಕಾರ್ಯಕ್ರಮ, ರಾತ್ರಿ 8ಕ್ಕೆ ಅತ್ತಾಳ ಪೂಜೆ,8.30ರಿಂದ ಕ್ಷೇತ್ರ ಆಡಳಿತ ಮೊಕ್ತೇಸರ ನ್ಯಾಯವಾದಿ ಬಿ.ಸುಬ್ಬಯ್ಯ ರೈ ಅವರ ಆಧ್ಯಕ್ಷತೆಯಲ್ಲಿ ಜರಗುವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಉದ್ಯಮಿ,ದಾನಿ ಕುಳೂರು ಕನ್ಯಾನ ಸದಾಶಿವ ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.ರಾಜರಾಮ ರಾವ್ ಧಾರ್ಮಿಕ ಭಾಷಣಗೈಯುವರು. ದುಬೈಯ ಉದ್ಯಮಿ ಗೋಪಾಲಕೃಷ್ಣ ಅರಿಕ್ಕಾಡಿ, ದೇಲಂಪಾಡಿ ಕ್ಷೇತ್ರ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಗಿರಿಧರ ಶೆಟ್ಟಿ ಮಂಗಳೂರು,ಪುತ್ತಿಗೆ ಗ್ರಾ. ಪಂ.ಅಧ್ಯಕ್ಷ ಡಿ.ಸುಬ್ಬಣ್ಣ ಆಳ್ವ, ಮಲಬಾರ್ ದೇವಸ್ವಂ ಬೋರ್ಡು ಸದಸ್ಯ ಶಂಕರ ರೈ ಮಾಸ್ತರ್, ದಾಮೋದರ ಶೆಟ್ಟಿ ಪಟ್ಲ, ಕೆ.ಸಿ.ಮೋಹನ್ ಕಳತ್ತೂರು,ಪ್ರೇಮಾ ಎಸ್.ರೈ ಕೊರತ್ತಿಪಾರೆ,. ಕ್ಷೇತ್ರ ಸೇವಾ ಸಮಿತಿ ಅಧ್ಯಕ್ಷ ಡಿ.ದಾಮೋದರನ್, ಕಾರ್ಯದರ್ಶಿ ಕೇಶವ ಡಿ ಮೊದಲಾದವರು ಭಾಗವಹಿಸುವರು.
ಬಳಿಕ ರಾತ್ರಿ ಗಂಟೆ 11ಯಿಂದ ನವಚೇತನ ಯೂತ್ ಕ್ಲಬ್ ಬಾಡೂರು ಇವರಿಂದ "ಕಾಸ್ ದ ಕಸರತ್ತ್" ತುಳು ನಾಟಕ ಪ್ರದರ್ಶನಗೊಳ್ಳಲಿದೆ.
ಮಾ.8ಕ್ಕೆ ಬೆಳಗ್ಗೆ 6 ಗಂಟೆಯಿಂದ ರುದ್ರಾಭಿಷೇಕ,9.30ರಿಂದ ಭಜನೆ, 11 ಗಂಟೆಗೆ ನವಕಾಭಿಷೇಕ,ಮಧ್ಯಾಹ್ನ 12 ಮಹಾಪೂಜೆ, ಸಂಜೆ 6.30ರಿಂದ ದೀಪಾರಾಧನೆ,7.30ರಿಂದ ಕ್ಷೇತ್ರ ಮಹಿಳಾ ಸಮಿತಿ ಸದಸ್ಯೆಯರಿಂದ ಮೆಗಾ ತಿರುವಾದಿರ,ರಾತ್ರಿ ಗಂಟೆ 8.ಕ್ಕೆ ಮಹಾಪೂಜೆ,8.30ರಿಂದ ದೇವರ ರಾಜಾಂಗಣ ಪ್ರವೇಶ,ನೃತ್ಯ ಬಲಿ,ಸಿಡಿಮದ್ದು ಪ್ರದರ್ಶನ,ಮಾ.9ಕ್ಕೆ ಬೆಳಗ್ಗೆ 9.30 ಗಂಟೆಯಿಂದ ಶ್ರೀದೇವರ ರಾಜಾಂಗಣ ಪ್ರವೇಶ,ದರ್ಶನ ಬಲಿ,ರಾಜಾಂಗಣ ಪ್ರಸಾದ,ಮಧ್ಯಾಹ್ನ 12.30ರಿಂದ ಪರಿವಾಋ ದೈವಗಳಿಗೆ ತಂಬಿಲ,ಮಂತ್ರಾಕ್ಷತೆಯೊಂದಿಗೆ ಉತ್ಸವ ಸಂಪನ್ನಗೊಳ್ಳಲಿದೆ.


0 Comments