ವಿಟ್ಲ: ಕುಕ್ಕಾಜೆ ಶ್ರೀ ಕಾಳಿಕಾಂಬ ಆಂಜನೇಯ ದೇವಸ್ಥಾನ ಮಾಣಿಲ ಕುಕ್ಕಾಜೆ ಇಲ್ಲಿನ ಕಾಲಿಕಾ ಕಲಾ ಸಂಘ ದ ವಾರ್ಷಿಕ ಮಹಾ ಸಭೆಯು ಸಂಘ ದ ಅಧ್ಯಕ್ಷರಾದ ಸಂಜೀವ ಕುಲಾಲ್ ಪಳನೀರು ಇವರ ಅಧ್ಯಕ್ಷತೆಯಲ್ಲಿ ನಡೆಯಿತು.
ಯಾವುದೇ ಕ್ಷೇತ್ರದ ಅಭಿವೃದ್ಧಿ ಕಾರ್ಯವು ನಡೆಯಬೇಕಾದರೆ ಸಂಘಟನೆಯ ಪಾತ್ರ ದೊಡ್ಡದಾಗಿರುತ್ತದೆ, ಇದರಂತೆ ಈ ಸಂಘಟನೆಯು ಕ್ಷೇತ್ರಕ್ಕೆ ಬೆನ್ನೆಲುಬಾಗಿ ಸಹಕರಿಸಿದ್ದಿರಿ ತಮಗೆ ತಾಯಿಯ ಅನುಗ್ರಹ ಸದಾ ಇರಲಿ. ಈ ಸಂಘಟನೆಯು ಇನ್ನೂ ಮಂದೆ ಸಾಮಾಜಿಕ ಸೇವೆ ಮಾಡುವ ಮೂಲಕ ದೇಶವಿದೇಶಗಳಲ್ಲಿ ಹೆಸರು ಗಳಿಸುವಂತೆ ತಾಯಿಯ ಅನುಗ್ರಹ ಇರಲಿ ಎಂದು ಕ್ಷೇತ್ರದ ಧರ್ಮದರ್ಶಿ ಶ್ರೀ ಶ್ರೀಕೃಷ್ಣ ಗುರೂಜಿಯವರು ಆಶೀರ್ವಾದಿಸಿದರು.
ಸಂಘಟನೆಯ ಕಾರ್ಯದರ್ಶಿ ವಾಸಪ್ಪ ಹಿರೆಬಾಂಡಾಡಿ ವಾರ್ಷಿಕ ಲೆಕ್ಕಪತ್ರ ಮಂಡನೆ ಮಾಡಿದರು, ನಂತರ ಧರ್ಮದರ್ಶಿಗಳ ನಿರ್ದೇಶನ ದಂತೆ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.
ವಾಸಪ್ಪ ಹಿರೆಬಾಂಡಾಡಿ( ಅಧ್ಯಕ್ಷರು)
ಸಂಜೀವ ಕುಲಾಲ್ ( ಉಪಾಧ್ಯಕ್ಷರು)
ನಾರಾಯಣ pk ಕುಕ್ಕಾಜೆ (ಕಾರ್ಯದರ್ಶಿ)
ನಾಗೇಶ್ ಕುಟೇಲು( ಜತೆ ಕಾರ್ಯದರ್ಶಿ)
ರವಿ ಎಸ್ಎಂ ಕುಕ್ಕಾಜೆ ( ಕೋಶಾಧಿಕಾರಿ) ಹಾಗೂ ಕಾರ್ಯಕಾರಿ ಸದಸ್ಯರನ್ನು ಆಯ್ಕೆ ಮಾಡಲಾಯಿತು.
ಸಂಘಟನೆಯ ಬೆಳವಣಿಗೆ ಗೆ ಸಂಘದ ಎಲ್ಲರೂ ಏಕಮನಸ್ಸಿನಿಂದ ನಮ್ಮೊಂದಿಗೆ ಸಹಕರಿಸಬೇಕು ಎಂದು ಕಾರ್ಯದರ್ಶಿ ನಾರಾಯಣ ಪಿಕೆ ಕರೆ ಕೊಟ್ಟರು. ಈ ಸಂದರ್ಭದಲ್ಲಿ ಕೃಷ್ಣಪ್ಪ ತಾರಿದಾಳ, ರವಿ ಕುಟ್ಯಮಡ್ಕ ದಯಾ ಅಮೀನ್ ಬಾಯಾರು,ಮತ್ತಿತರರು ಉಪಸ್ಥಿತರಿದ್ದರು.
ನವೀನ್ ತಾರಿದಾಳ ಸ್ವಾಗತಿಸಿ ರವಿ ಎಸ್ಎಂ, ವಂದಿಸಿದರು.



0 Comments