ಬದಿಯಡ್ಕ: ಪರಮ್ ಕಂಪ್ಯೂಟರ್ ಸೆಂಟರ್ ನಲ್ಲಿ ಕೇರಳ ರೂಟ್ರೋನಿಕ್ಸ್ ವತಿಯಿಂದ ಮಾತೃಶ್ರೀ ಚಾರಿಟೇಬಲ್ ಟ್ರಸ್ಟಿನ ಸಹಯೋಗದೊಂದಿಗೆ ಬೇಸಿಗೆ ರಜಾ ಕಾಲದ ತರಬೇತಿಗಳಿಗೆ ಚಾಲನೆ ನೀಡಲಾಗಿದೆ. ಟ್ರ‍್ರಸ್ಟಿನ ವ್ಯವಸ್ಥಾಪಕ ನಿರ್ದೇಶಕ ಕಿಶೋರ್ ಕುಮಾರ್ ಉದ್ಘಾಟಿಸಿದರು. ಪರಮ್ ಕಂಪ್ಯೂಟರ್ ಸಂಸ್ಥೆಯ ಮುಖ್ಯ ನಿರ್ದೇಶಕಿ ಮಮತ ಕೆ,ಅಧ್ಯಾಪಕಿ ಚೈತ್ರ ಕೆ, ಟ್ರಸ್ಟಿನ ಕೋಶಾಧಿಕಾರಿ ಪ್ರಜೇಶ್, ಸದಸ್ಯ ಪ್ರದೀಪ್ ಮೊದಲಾದವರು ಉಪಸ್ಥಿತರಿದ್ದರು. ಎರಡು ತಿಂಗಳ ಅವಧಿ ಕಾಲ ಶಿಬಿರದಲ್ಲಿ ಶಾಲಾ ಬ್ಯಾಗ್,ಕಲಿಕೋಪಕರಣಗಳ ಜತೆಗೆ ಸ್ಪೋಕನ್ ಇಂಗ್ಲೀಷ್, ಡ್ರಾಯಿಂಗ್ ,ಕ್ರಾಪ್ಟ್ ತರಬೇತಿಗಳನ್ನು ಉಚಿತವಾಗಿ ನೀಡಲಾಗುತ್ತದೆ. ಆಸಕ್ತರು 8606338429 ಈ ನಂಬ್ರವನ್ನು ಸಂಪರ್ಕಿಸಲು ಕೋರಲಾಗಿದೆ.
0 Comments