ಕಾಟುಕುಕ್ಕೆಯಲ್ಲಿ ವಾಹನ ಅಪಘಾತದಲ್ಲಿ ಚಿಕಿತ್ಸೆಯಲ್ಲಿದ್ದ ವ್ಯಕ್ತಿ ಮೃತ್ಯು


ಪೆರ್ಲ: ಕಾಟುಕುಕ್ಕೆ ಸಮೀಪ ಬಾಳೆಮೂಲೆಯಲ್ಲಿ ಉಂಟಾದ ವಾಹನ ಅಪಘಾತದಲ್ಲಿ ಗಂಭೀರ ಗಾಯಗೊಂಡ ಬೈಕ್ ಸವಾರರಾದ ವ್ಯಕ್ತಿಯೋರ್ವರು ಚಿಕಿತ್ಸೆಗೆ ಸ್ಪಂದಿಸದೆ ನಿಧನರಾಗಿದ್ದಾರೆ. ರವಿವಾರ ಸಂಜೆ ಸುಮಾರು 4 ಗಂಟೆಗೆ ಬಾಳೆಮೂಲೆಯಲ್ಲಿ ಕಾರು - ಬೈಕು ಮಧ್ಯೆ ಅಪಘಾತವುಂಟಾಗಿತ್ತು. ಪರಿಣಾಮ ಬೈಕ್ ಸವಾರರಾದ ಮೊಗೇರು ನಿವಾಸಿ ಸೀತಾರಾಮ ನಾಯ್ಕ ಯಾನೆ ಮುದ್ದು ನಾಯ್ಕ  (49) ನಿಧನರಾಗಿದ್ದಾರೆ. ಮೃತರು ಅಲ್ಪ ವರ್ಷಗಳ ಹಿಂದೆ ಕರ್ನಾಟಕದಿಂದ ಬಂದು ಬಾಳೆಮೂಲೆಯಲ್ಲಿ ಜಾಗ ಖರೀದಿಸಿ ವಾಸಿಸುತ್ತಿದ್ದರು. ಮೃತರು ಪತ್ನಿ ವಾರಿಜ ಮಗ ಸಂಕೇತ್ ಕುಮಾರ್ ಮಗಳು ಅಕ್ಷತಾ ಅಪಾರ ಬಂಧುಬಳಗನ್ನಗಲಿದ್ದಾರೆ.

Post a Comment

0 Comments