ಪೆರ್ಲ : ಕುಟುಂಬಶ್ರೀ ಜಿಲ್ಲಾ ಮಿಷನ್ ನ ವತಿಯಿಂದ ನಡೆಸಲ್ಪಡುವ "ಅರಂಞಿ -24"ಮಂಜೇಶ್ವರ ತಾಲೂಕು ಮಟ್ಟದ ಕುಟುಂಬಶ್ರೀ ಕಲೋತ್ಸವ ಶನಿವಾರದಂದು ಎಣ್ಮಕಜೆ ಪಂಚಾಯತಿನ ಪೆರ್ಲದ ಭಾರತೀ ಸದನದಲ್ಲಿ ಅರಂಭಗೊಂಡಿತು.
ಇದರ ಅಂಗವಾಗಿ ವೇದಿಕಯೇತರ ಸ್ಪರ್ಧೆಗಳಾದ ಕವಿತೆ,ಕಥೆ,ಚಿತ್ರ ರಚನೆ ಸ್ಪರ್ಧೆಗಳಲ್ಲದೆ ಕಂಠಪಾಟ,ಸಮೂಹ ಗಾಯನ, ಜಾನಪದ ಹಾಡು,ಮಿಮಿಕ್ರಿ ಮೊದಲಾದ ಸ್ಪರ್ಧೆಗಳು ಜರಗಿದವು.
ಮಂಜೇಶ್ವರ ತಾಲೂಕಿನ 8 ಪಂಚಾಯತಿನ ಕುಟುಂಬಶ್ರೀ ಸದಸ್ಯೆಯರಾದ ಸ್ಪರ್ಥಾರ್ಥಿಗಳು ಉತ್ಸಾಹದಿಂದ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು.
ಗಡಿನಾಡಿನ ಎಣ್ಮಕಜೆ ಪಂಚಾಯತಿನಲ್ಲಿ ಇದೇ ಮೊತ್ತ ಮೊದಲ ಬಾರಿಗೆ ಈ ತಾಲೂಕು ಕಲೋತ್ಸವ ನಡೆಯುತ್ತಿದ್ದು ಎಣ್ಮಕಜೆ ಗ್ರಾಮ ಪಂಚಾಯತ್ ಸಿಡಿಎಸ್ ಕಲೋತ್ಸವದ ಅತಿಥೇಯವಹಿಸಿದೆ. ಮಂಜೇಶ್ವರ ಬ್ಲೋಕ್ ಪಂ.ಅಧ್ಯಕ್ಷೆ ಸಮೀನಾ ಟೀಚರ್, ಬ್ಲೋಕ್ ಪಂ.ಸದಸ್ಯ ಕೆ.ಪಿ.ಅನಿಲ್ ಕುಮಾರ್, ಎಣ್ಮಕಜೆ ಗ್ರಾ.ಪಂ.ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಎಸ್.ಗಾಂಭೀರ್, ಸೌಧಭಿ ಹನೀಪ್, ಪುತ್ತಿಗೆ ಪಂಚಾಯತ್ ಅಧ್ಯಕ್ಷ ಡಿ.ಸುಬ್ಬಣ್ಣ ಆಳ್ವ, ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷೆ ಅನಿತಾ,ಸಿಡಿಎಸ್ ಅಧ್ಯಕ್ಷೆ ಜಲಜಾಕ್ಷಿ, ಪಂಚಾಯತ್ ಸಹಾಯಕ ಕಾರ್ಯದರ್ಶಿ ಗಿರೀಶ್, ತಾಲೂಕು ಕಲಶೋತ್ಸವ ಇನ್ ಚಾರ್ಜರ್ ಲಿಜಿನ್, ಸಚಿನ್ ರಾಜ್ ಬಿ.ಸಿ, ಸಿಡಿಎಸ್ ಉಪಾಧ್ಯಕ್ಷೆ ಶಶಿಕಲ ಸ್ವರ್ಗ, ಸಿಡಿಎಸ್ ಸದಸ್ಯೆಯರು ಕಾರ್ಯಕ್ರಮದ ಯಶಸ್ವಿಗೆ ನೇತೃತ್ವ ನೀಡಿದರು.
ಚಿತ್ರಗಳು : ಜಯ ಮಣಿಯಂಪಾರೆ Focus Digital Studio Sheni - Maniyampare












0 Comments