ದುಬೈಯಲ್ಲಿ ಫಾರ್ಚೂನ್ ಗ್ರೂಪ್ ಆಫ್ ಹೋಟೆಲ್ಸ್ ಏರ್ಪಡಿಸಿದ ಯಶಸ್ವಿ ಬೃಹತ್ ರಕ್ತದಾನ ಶಿಬಿರದಲ್ಲಿ ನೂರಾರು ಜನ ಸಹಭಾಗಿ

 


ದುಬೈ : ಫಾರ್ಚೂನ್ ಗ್ರೂಪ್ ಆಫ್ ಹೋಟೆಲ್ಸ್ ನ ಆಡಳಿತ ನಿರ್ದೇಶಕರಾದ ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿಯವರು ತಮ್ಮ ಮಾತೃ ಪಿತೃರವರಾದ ಶ್ರೀಮತಿ ಸರೋಜಿನಿ ಶೆಟ್ಟಿ ಮತ್ತು ಶ್ರೀ ನಾರಯಣ ಶೆಟ್ಟಿಯವರ ಐವತ್ತೆಂಟನೇ ವರ್ಷದ ಮದುವೆಯ ಶುಭದಿನದಂದು (ಮೆ.22) ಆಯೋಜಿಸಿದ 13 ನೇ ವರ್ಷದ ರಕ್ತದಾನ ಶಿಬಿರ ಯಶಸ್ವಿಯಾಗಿ ನಡೆಯಿತು.

       


   ನಗರದ ಅಲ್ ಗಿಸಾಸ್ ನ ಫಾರ್ಚೂನ್ ಪ್ಲಾಝದಲ್ಲಿ ಬೆಳಿಗ್ಗೆಯಿಂದ ಮಧ್ಯಾಹ್ನ ಎರಡು ಗಂಟೆಯ ವರೆಗೆ ಫಾರ್ಚೂನ್ ಸಂಸ್ಥೆಯ ಎಲ್ಲಾ ಸಿಬ್ಬಂದಿ ವರ್ಗದವರು,ಶೆಟ್ಟಿಯವರ ಸ್ನೇಹಿತ ಮಿತ್ರರು,ಅಭಿಮಾನಿಗಳು, ಯುಎಇಯ ತುಳು ಕನ್ನಡ ಸಂಘ ಸಂಸ್ಥೆಗಳ ಪದಾಧಿಕಾರಿಗಳು ರಕ್ತದಾನ ಮಾಡಿ ಮಾನವೀಯತೆಯ ಮೌಲ್ಯವನ್ನು ಎತ್ತಿ ಹಿಡಿದರು.

       


ದುಬೈ ಹೆಲ್ತ್ ಕೇರ್ ನ ಸಹಯೋಗದೊಂದಿಗೆ ನಡೆದ ರಕ್ತದಾನ ಶಿಬಿರದಲ್ಲಿ ಯುಎಇ ತುಳುನಾಡಿನ ಕನ್ನಡ ಸಂಘ ಸಂಸ್ಥೆಗಳ ರಕ್ತದಾನ ಸಂಘಟಕ ಬಾಲಕೃಷ್ಣ ಸಾಲಿಯಾನ್,ಫಾರ್ಚೂನ್ ಗ್ರೂಪ್ ಆಫ್ ಹೋಟೆಲ್ ಸಂಸ್ಥೆಯ ಸಿಬ್ಬಂದಿ ವಸಂತ ಶೆಟ್ಟಿ,ಸಂದೇಶ್ ಕುಮಾರ್ ಶಿಬಿರದ ನೇತ್ರತ್ವ ವಹಿಸಿದರು.


 





    ಸಂಸ್ಥೆಯ ಆಡಳಿತ ನಿರ್ದೇಶಕರಾದ ಪ್ರವೀಣ್ ಕುಮಾರ್ ಶೆಟ್ಟಿಯವರು ತನ್ನ ತಂದೆ ತಾಯಿಯ ವಿವಾಹ ವಾರ್ಷಿಕೋತ್ಸವದ ಅಂಗವಾಗಿ ಏರ್ಪಡಿಸಿದ್ದ ಹನ್ನೆರಡನೆಯ ವರ್ಷದ ಅದ್ದೂರಿಯಾಗಿ ರಕ್ತದಾನ ಶಿಬಿರದಲ್ಲಿ ರಕ್ತದಾನ ಮಾಡಿದ ದಾನಿಗಳಿಗೆ ಮಾಧ್ಯಮದ ಮೂಲಕ ಅಭಿನಂದನೆಯ ಮೂಲಕ ಧನ್ಯವಾದ ತಿಳಿಸಿದರು.

ವರದಿ : ವಿಜಯಕುಮಾರ್ ಶೆಟ್ಟಿ ಗಾಣದಮೂಲೆ ಮಜಿಬೈಲ್ (ದುಬೈ)

Post a Comment

0 Comments