ಕನ್ನಡ ಭವನ ಗ್ರಂಥಾಲಯದಲ್ಲಿ ವಾಚನ ವಾರಾಚರಣೆ ಸಮಾರೋಪ ಸಮಾರಂಭ

 


ಕಾಸರಗೋಡು: ನಗರದ ಸೀತಮ್ಮ ಪುರುಷ ನಾಯಕ ಕನ್ನಡ ಭವನ ಮತ್ತು ಗ್ರಂಥಾಲಯದಲ್ಲಿ ವಾಚನ ಸಮಾರೋಪ ಕಾರ್ಯಕ್ರಮ ನಡೆಯಿತು. 

ವಿನೂತನ ಪ್ರಕಾರಗಳಲ್ಲಿ ಕನ್ನಡ ಕಾರ್ಯಕ್ರಮಗಳನ್ನು ಆಯೋಜಿಸಿ ಗಡಿನಾಡಿನಲ್ಲಿ ಕನ್ನಡ ಕಂಪನ್ನು ಕಾಯ್ದಿರಿಸುವಲ್ಲಿ ವಾಮನ್ ರಾವ್ ಬೇಕಲ್ ಸಾರಥ್ಯದ ಕನ್ನಡ ಭವನದ ಕಾರ್ಯಕ್ರಮಗಳು ಅನುಕರಣೀಯ, ಅಭಿನಂದನೀಯ ಕನ್ನಡ ಭವನದ ಕಾರ್ಯಗಳಲ್ಲಿ ಕೈ ಜೋಡಿಸಲು ಹೆಮ್ಮೆ ಅನಿಸುತ್ತದೆ. ಇದೀಗ ವಿಸ್ತೃತವಾದ ಗ್ರಂಥಾಲಯ ವಾಚನಾಲಯವನ್ನು ಸಜ್ಜುಗೊಳಿಸಿ ವಿದ್ಯಾಕೇಂದ್ರಗಳನ್ನನು ಆಹ್ವಾನಿಸಿ ವಿದ್ಯಾರ್ಥಿಗಳಿಗೆ ಪುಸ್ತಕ ಸಂವಾದ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿ ಕನ್ನಡದ ಕಹಳೆಯನ್ನು ಮೊಳಗಿಸುತ್ತಿದ್ದಾರೆ. ಎಲ್ಲಾ ವಿದ್ಯಾರ್ಥಿಗಳು ವಿದ್ಯಾಕೇಂದ್ರಗಳು ಇಲ್ಲಿ ಬರಲಿ


ಎಂದು ಸಮಾಜಿಕ ಕನ್ನಡ ಕಾರ್ಯಕರ್ತ ಬಾಲ ಭವನ್ ವಿದ್ಯಾಕೇಂದ್ರದ ಎಕಾಡೆಮಿಕಲ್ ಎಡ್ವೈಸರ್ ಕೆ.ಎನ್.ವೆಂಕಟ್ರಮಣ ಹೊಳ್ಳ ನಗರದ ಸೀತಮ್ಮ ಪುರುಷ ನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯದಲ್ಲಿ ನಡೆದ ವಾಚನ ವಾರ ಸಮಾರೋಪ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು. 


ಗರದ ಬಾಲ ಭವನ ಮತ್ತು ಕನ್ನಡ ಭವನ ಸಂಯುಕ್ತವಾಗಿ ಏರ್ಪಡಿಸಿದ ಕಾರ್ಯಕ್ರಮದಲ್ಲಿ ವಾಮನ್ ರಾವ್ ಬೇಕಲ್ ಅಧ್ಯಕ್ಷತೆ ವಹಿಸಿದರು, ಮುಖ್ಯ ಅತಿಥಿಗಳಾಗಿ ಬಾಲಭವನ ವಿದ್ಯಾಕೇಂದ್ರದ ಮುಖ್ಯೋಪದ್ಯಾಯಿನಿ ಲೀಲಾವತಿ ನಾಯರ್ ಅಧ್ಯಾಪಿಕೆ ಜಯಂತಿ ಪರ್ತಕರ್ತ ಜಗನ್ನಾಥ್ ಶೆಟ್ಟಿ, ಸಂಪನ್ಮೂಲ ವ್ಯಕ್ತಿಗಳಾಗಿ ಜಯಾನಂದ ಕುಮಾರ್ ಹೊಸದುರ್ಗ, ಜಯ ಮಣಿಯಂಪಾರೆ, ಪ್ರದೀಪ್ ಬೇಕಲ್ ಬಾಗವಹಿಸಿದರು. 





ಪುಸ್ತಕಗಳೊಂದಿಗೆ ಸಂವಾದ, ಕವಿತಾ ರಚನೆ, ವರದಿ ತಯಾರಿಕೆ, ಭಜನೆ ಕಲಿಯುವಿಕೆ ಹಾಗೂ ಕೃಷಿ ಸಂಯೋಜನೆ, ಪ್ರಾಚ್ಯ ವಸ್ತು, ನಾಣ್ಯ ಸಂಗ್ರಹ ವೀಕ್ಷಣೆಯೊಂದಿಗೆ ತಮ್ಮ ಅನಿಸಿಕೆಗಳನ್ನು ಭಾಷಣ ರೂಪದಲ್ಲಿ ಭಾಗವಹಿಸಿದ ಸುಮಾರು 50 ಮಂದಿ ವಿದ್ಯಾರ್ಥಿಗಳು ತೊಡಗಿಸಿಕೊಂಡು ಹರ್ಷಗೊಂಡರು. ಮುಖ್ಯೋಪಧ್ಯಾಯಿನಿ ಲೀಲಾವತಿ ನಾಯರ್‌ರನ್ನು ಈ ಸಂಧರ್ಭದಲ್ಲಿ ಸ್ಮರಣಿಕೆ ಆದರದೊಂದಿಗೆ ಗೌರವಿಸಲಾಯಿತು. ಸಂಪನ್ಮೂಲ ವ್ಯಕ್ತಿಗಳಿಗೆ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ, ಪುಸ್ತಕಗಳೊಂದಿಗೆ ಅಭಿನಂದಿಸಲಾಯಿತು. ಗ್ರಂಥಾಲಯ ಸಂಚಾಲಕಿ ಸಂಧ್ಯಾರಾಣಿ ಟೀಚರ್ ಸ್ವಾಗತಿಸಿ ಕಾರ್ಯದರ್ಶಿ ವಸಂತ್ ಕೆರೆಮನೆ ವಂದಿಸಿದರು ಜಯ ಮಣಿಯಂಪಾರೆ ಕಾರ್ಯಕ್ರಮ ನಿರೂಪಿಸಿದರು.

Post a Comment

0 Comments