ಸ್ವರ ಭ್ರಾಮರಿ ಖ್ಯಾತಿಯ ಗಾಯಕ ಯುವರಾಜ್ ಅಗಲುವಿಕೆಗೆ ಸಹಸ್ರಾರು ಜನ ಕಂಬನಿ

 


ಯುಎಇ : ದುಬೈ ಕರ್ನಾಟಕ ಸಂಘದ ಸಾಂಸ್ಕೃತಿಕ ಕಾರ್ಯದರ್ಶಿ,ದುಬೈ ತುಳು-ಕನ್ನಡಿಗರ ಖ್ಯಾತ  ಗಾಯಕ ಯುವರಾಜ್ ಕೆ.ದೇವಾಡಿಗ ರವಿವಾರ ಹೃದಯಾಘಾತದಿಂದ ನಿಧನರಾಗಿದ್ದು ಇವರ ಅನಿರೀಕ್ಷಿತ ಅಗಲುವಿಕೆಗೆ ಸಹಸ್ರಾರು ಜನ ಕಂಬನಿ ಮಿಡಿದಿದ್ದಾರೆ.

ಮಂಗಳೂರಿನ ಕುಂಟಿಕಾನದ ನಿವಾಸಿಯಾಗಿರುವ ಇವರು ಶಾರ್ಜದ ಪ್ರತಿಷ್ಠಿತ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದರು.ಸ್ವರ ಬ್ರಾಮರಿ ಎಂಬ ಯೂಟ್ಯೂಬ್ ಮತ್ತು ಫೇಸ್ ಬುಕ್ ನ ಮೂಲಕ ಪ್ರಖ್ಯಾತ ಪಡೆದಿರುವ ಯುವರಾಜ್.ಕಳೆದ ವರ್ಷ ದುಬೈನಲ್ಲಿ ಸ್ವರ ಭ್ರಾಮರಿಯ ವಾರ್ಷಿಕೋತ್ಸವ ಮತ್ತು ಜನ್ನ ಮೆಚ್ಚುಗೆ ಪಡೆದಿದ್ದಾರೆ. ಇವರಿಗೆ   ಎರಡು ವರ್ಷಗಳ ಹಿಂದೆಯಷ್ಟೆ ಮದುವೆಯಾಗಿದ್ದು ಪತ್ನಿ  ಪ್ರತಿಮಾ ಯು ದೇವಾಡಿಗ ಹಾಗೂ ಅಪಾರ ಬಂದು ಬಳಗವನ್ನಗಲಿದ್ದಾರೆ.


Post a Comment

0 Comments