ಇಡಿಯಡ್ಕದಲ್ಲಿ 1801ನೇ ಮದ್ಯವರ್ಜನ ಶಿಬಿರದ ನವಜೀವನ ಸದಸ್ಯರ ಕುಟುಂಬ ಮಿಲನ


ಪೆರ್ಲ: ಧ.ಗ್ರಾ. ಯೋಜನೆಯ ಜನ ಜಾಗೃತಿ ವೇದಿಕೆಯ ಆಶ್ರಯದಲ್ಲಿ ನಡೆದ 1801ನೇ ಮದ್ಯ ವರ್ಜನ ಶಿಬಿರದಲ್ಲಿ ಪಾಲ್ಗೊಂಡು ಪಾನಮುಕ್ತರಾದ ಶಿಬಿರಾರ್ಥಿಗಳ ಕುಟುಂಬ ಮಿಲನ ಕಾರ್ಯಕ್ರಮ 

ಇಡಿಯಡ್ಕ ಶ್ರೀ ದುರ್ಗಾ ಪರಮೇಶ್ವರಿ (ಉಳ್ಳಾಲ್ತಿ )ದೇವಸ್ಥಾನದ ಸಭಾಂಗಣದಲ್ಲಿ ಜರಗಿತು.  .  ಜನಜಾಗೃತಿ ವೇದಿಕೆ ಉಡುಪಿ ಪ್ರಾದೇಶಿಕ ಯೋಜನಾಧಿಕಾರಿ ಗಣೇಶ್ ಆಚಾರ್ಯ,ಶಿಬಿರಾಧಿಕಾರಿ ದೇವಿ ಪ್ರಸಾದ್ ಸುವರ್ಣ ದಿಕ್ಸೂಚಿ ಭಾಷಣಗೈದರು.


ಜನ ಜಾಗೃತಿ ವೇದಿಕೆಯ ಮಂಜೇಶ್ವರ ತಾಲೂಕು ಅಧ್ಯಕ್ಷ ಡಾ.ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ,ಸ್ಥಾಪಕ ಅಧ್ಯಕ್ಷ ಗೋಪಾಲ ಶೆಟ್ಟಿ ಅರಿಬೈಲು,, ಪೆರ್ಲ ವಲಯ ಅಧ್ಯಕ್ಷ  ಬಿ. ಪಿ. ಶೇಣಿ.ವಲಯ ಸದಸ್ಯ ಟಿ.ಪ್ರಸಾದ್, ಮದ್ಯವರ್ಜನ ಶಿಬಿರದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಸದಾನಂದ ಮಾಸ್ತರ್ ಕುದ್ವ, ಶ್ತೀಧರ್ ನಾಯಕ್ ಕುಕ್ಕಿಲ,ಧ.ಗ್ರಾ.ತಾಲೂಕು ಯೋಜನಾಧಿಕಾರಿ ಶಶಿಕಲ ಸುವರ್ಣ, ಪೆರ್ಲ ವಲಯ ಮೇಲ್ವಿಚಾರಕಿ ಜಯಶ್ರೀ, ಸೇವಾ ಪ್ರತಿನಿಧಿ ರೇಖಾ ಜ್ಯೋತಿ ಮೊದಲಾದವರು  ಪಾಲ್ಗೊಂಡು ಮಾತನಾಡಿದರು.ನವಜೀವನ ಸದಸ್ಯರು ಕುಟುಂಬಿಕರು ಸಭೆಯಲ್ಲಿ ಉಪಸ್ಥಿತರಿದ್ದರು.

Post a Comment

0 Comments