ಕಾಸರಗೋಡು : ಶ್ರೀಮಲ್ಲಿಕಾರ್ಜುನ ಕ್ಷೇತ್ರ ಪರಿಸರದಲ್ಲಿ ನಡೆಯುವ 69ನೇ ವರ್ಷದ ಸಾರ್ವಜನಿಕ ಗಣೇಶೋತ್ಸವದ ವಿಗ್ರಹ ರಚನೆಗೆ ಮುಹೂರ್ತ ನಡೆಯಿತು. ಶಿಲ್ಪಿ ಲಕ್ಷೀಶ ಆಚಾರ್ಯ ಮತ್ತು ಯೋಗೀಶ ಆಚಾರ್ಯ ಅವರ ಕಾರ್ಮಿಕತ್ವದಲ್ಲಿ ಜರಗಿದ ಕಾರ್ಯಕ್ರಮದಲ್ಲಿ ವಿಗ್ರಹ ಸೇವಾದಾರರಾದ ಅರವಿಂದ ಮತ್ತು ಕುಟುಂಸ್ಥರು, ಸಮಿತಿಯ ಅಧ್ಯಕ್ಷರಾದ ನ್ಯಾಯವಾದಿ ಮುರಳೀಧರ, ಕಾರ್ಯದರ್ಶಿ ಕೆ.ಎನ್.ಕಮಲಾಕ್ಷ,,ಕೋಶಾಧಿಕಾರಿ ಆಶೋಕ ಕೆ, ನಾಗೇಶ ಮನ್ನಿಪ್ಪಾಡಿ, ರವಿ ಕೇಸರಿ,ಧಾರ್ಮಿಕ ಸಾಮಾಜಿಕ ಮುಂದಾಳು ಕೆ.ಎನ್ ವೆಂಕಟ್ರಮಣ ಹೊಳ್ಳ ಕಾಸರಗೋಡು, ಉಮೇಶ,ನಾಗೇಶ ಗಟ್ಟಿ,ಜಲಜಾಕ್ಷಿ ಟೀಚರ್ ಮೊದಲಾದವರು ಉಪಸ್ಥಿತರಿದ್ದರು.
0 Comments