ಬದಿಯಡ್ಕ : ಎಲೈಟ್ ಕಾಲೇಜಿನ 2024-25ನೇ ಶೈಕ್ಷಣಿಕ ವರ್ಷದ ಪ್ಲಸ್ ವನ್ ಹಾಗೂ ಎನ್ ಟಿಟಿಸಿ ತರಗತಿಗಳ ನೊಂದಾವಣೆಯ ಉದ್ಘಾಟನೆಯನ್ನು ಉದ್ಯಮಿ ದಾನಿ,ಧಾರ್ಮಿಕ ಮುಂದಾಳು ಬಿ ಗೋಪಾಲಕೃಷ್ಣ ಪೈ ನೇರೆವೇರಿಸಿದರು. ಬಳಿಕ ಮಾತನಾಡಿದ ಅವರು "ಸಮಾಜಕ್ಕೆ ಶಿಕ್ಷಣವನ್ನು ಧಾರೆ ಎರೆಯುವ ಈ ವಿದ್ಯಾಸಂಸ್ಥೆಯನ್ನು ಮನ ಬಿಚ್ಚಿ ಉದ್ಘಾಟಿಸಿದ್ದೇನೆ. ನೀವು ಕೂಡಾ ಮನ ತೆರೆದು ಭೋಧಿಸಿ ವಿದ್ಯಾರ್ಥಿಗಳನ್ನು ಶೈಕ್ಷಣಿಕ ಉತ್ತುಂಗಕ್ಕೇರಿಸಿದರೆ ಸಂಸ್ಥೆಯ ಹೆಸರು ಕೂಡಾ ಉನ್ನತಿಗೇರಲು ಸಾಧ್ಯ" ಎಂದರು.
ಕೊಡ್ಯಮ್ಮೆ ಅಂತಲ ಮೊಗೇರ ಚಾವಡಿಯ ಹಿರಿಯವರಾದ ಕೆ.ಕೆ.ಸ್ವಾಮಿಕೃಪಾ,ಸಾಮಾಜಿಕ ಮುಂದಾಳು ಬಿ.ನರಸಿಂಹ ಶೆಣೈ,ಉದಯ ಕುಮಾರ್ ಎಂ,ವಿದ್ಯಾ ಟೀಚರ್ ಬದಿಯಡ್ಕ, ಮಮತಾ ಚೈತ್ರ ಬೆಳಿಂಜ ಸುಜಯ ನೀರ್ಚಾಲು ಮೊದಲಾದವರು ಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶುಪಾಲ ಕಿಶೋರ್ ಕುಮಾರ್ ಸ್ವಾಗತಿಸಿ ನಿರ್ದೇಶಕ ಪ್ರದೀಪ್ ಕುಮಾರ್ ಎಂ ವಂದಿಸಿದರು.
*ಅರ್ಜಿ ಅಹ್ವಾನ*
ಎಲೈಟ್ ಕಾಲೇಜ್ ಬದಿಯಡ್ಕ ಪ್ಲಸ್ ವನ್ ತರಗತಿಗಳಿಗೆ ಅರ್ಜಿ ಆಹ್ವಾನಿಸಲಾಗಿದೆ
ಬದಿಯಡ್ಕ ಪರಿಸರದ ವಿದ್ಯಾರ್ಥಿಗಳಿಗೆ ಅತಿ ಕಡಿಮೆ ದರದಲ್ಲಿ ಪ್ಲಸ್ ವನ್ ಕೋಮರ್ಸ್ ಮತ್ತು ಹುಮಾನಿಟೀಸ್ ಕೋರ್ಸ್, ಎನ್ ಟಿಟಿಸಿ ಕೋರ್ಸು ಗಳಿಗೆ ಮತ್ತು ಒಂದು ತಿಂಗಳ ಮೆಹಂದಿ ತರಬೇತಿಗೆ ಅರ್ಜಿ ಕರೆಯಲಾಗಿದೆ
* ಕೇರಳ ಸರಕಾರ ಅಂಗೀಕೃತ ಕಂಪ್ಯೂಟರ್ ತರಬೇತಿ
* ವಿದ್ಯಾರ್ಥಿಗಳಿಗೆ ಪ್ರತ್ಯೇಕ ಫೀಸ್ ರಿಯಾತಿ
* ಕೇಂದ್ರ/ ರಾಜ್ಯ ಸರಕಾರಿ ಉದ್ಯೋಗಿ ಮಕ್ಕಳಿಗೆ ರಿಯಾಯಿತಿ
ಹೆಚ್ಚಿನ ವಿವರಗಳಿಗೆ
*Elite college Badiadka*
Opp HP Petro Pump Perla road Badiadka
8606338429/9544819956








0 Comments