ಶೇಣಿ ಶಾಲಾ ಹೈಸ್ಕೂಲ್ ವಿಭಾಗಕ್ಕೆ ನೀರು ಶುದ್ಧೀಕರಣ ಯಂತ್ರ ವಿತರಣೆ



ಶೇಣಿ:  ಶ್ರೀ ಶಾರದಾಂಬ ಹೈಯರ್ ಸೆಕೆಂಡರಿ ಶಾಲೆಯ  ಹೈಸ್ಕೂಲ್ ವಿಭಾಗಕ್ಕೆ ಹಿರಿಯ ಅಧ್ಯಾಪಕಿ  ವೀಣಾ ಅವರು ನೀರು ಶುದ್ಧೀಕರಣ ಯಂತ್ರವನ್ನು ಶಾಲೆಗೆ ಕೊಡುಗೆಯಾಗಿ ನೀಡಿದರು.ಕಾರ್ಯಕ್ರಮದ ಉದ್ಘಾಟನೆಯನ್ನು ಶಾಲಾ ನಿವೃತ್ತ ಮುಖ್ಯೋಪಾಧ್ಯಾಯಿನಿ  ಶಾರದಾ ವೈ ಅವರು ನಿರ್ವಹಿಸಿದರು. ಈ ಸಂದರ್ಭದಲ್ಲಿ ಶಾಲಾ ಮುಖ್ಯೋಪಾಧ್ಯಾಯರಾದ  ಶ್ರೀಶಕುಮಾರ್ ಎಂ.ಪಿ,

ಯು.ಪಿ ಶಾಲಾ ಮುಖ್ಯೋಪಾಧ್ಯಾಯರಾದ ರಾಧಾಕೃಷ್ಣ ನಾಯಕ್, ಶಾಲಾ ಪಿ ಟಿ ಎ ಅಧ್ಯಕ್ಷರಾದ ವಿಲ್ಸನ್ ಡಿ'ಸೋಜ , ಶಿಕ್ಷಕ ವೃಂದ ಹಾಗೂ ಸಿಬಂದಿಗಳು ಉಪಸ್ಥಿತರಿದ್ದರು. 


ಈ ಸಂದರ್ಭದಲ್ಲಿ  ನೀರು ಶುದ್ಧೀಕರಣ ಯಂತ್ರವನ್ನು
ಕೊಡುಗೆಯಾಗಿ ನೀಡಿದ  ವೀಣಾ ಟೀಚರ್ ಅವರನ್ನು ಸನ್ಮಾನಿಸಲಾಯಿತು. ಸಜಿತ ಟೀಚರ್ ಸ್ವಾಗತಿಸಿ  ಶಿಕ್ಷಕ ಮೊಹಮ್ಮದ್ ವಂದಿಸಿದರು  ದಿವ್ಯಾಟೀಚರ್ ನಿರೂಪಿಸಿದರು.

Post a Comment

0 Comments