ನಾಳೆ ಅರೆಕ್ಕಾಡಿಯಲ್ಲಿ ಎಣ್ಮಕಜೆ ಕುಟುಂಬಶ್ರೀಯ ವರ್ಷ ಋತು ಸಂಭ್ರಮ

 


ಪೆರ್ಲ : ಎಣ್ಮಕಜೆ ಗ್ರಾಮ ಪಂಚಾಯತು ಕುಟುಂಬಶ್ರೀ ಸಿಡಿಎಸ್ ನೇತೃತ್ವದಲ್ಲಿ ವರ್ಷ ಋತು ಸಂಭ್ರಮ (ಮಯ ಪೊಲಿಮ) ಕಾರ್ಯಕ್ರಮ ಕಾಟುಕುಕ್ಕೆ ಸಮೀಪದ ಅರೆಕ್ಕಾಡಿ ಗದ್ದೆಯಲ್ಲಿ ಜುಲೈ 7ಕ್ಕೆ  ನಡೆಯಲಿದೆ. ಬೆಳಿಗ್ಗೆ 9 ಗಂಟೆಗೆ ಮಕ್ಕಳಿಗೆ ಮಹಿಳೆಯರ ಕೆಸರು ಗದ್ದೆಯ ವಿವಿದ ಆಟೋಟ ಸ್ಪರ್ಧೆಯನ್ನು ಮಂಜೇಶ್ವರ ಶಾಸಕ ಎಕೆಎಂ ಆಶ್ರಫ್ ಉದ್ಘಾಟಿಸುವರು. ಎಣ್ಮಕಜೆ ಗ್ರಾ.ಪಂ.ಅಧ್ಯಕ್ಷ ಸೋಮಶೇಖರ್ ಜೆ.ಎಸ್.ಅಧ್ಯಕ್ಷತೆವಹಿಸುವರು. ಕುಟುಂಬಶ್ರೀ ಮಿಷನ್ ನ ಡಿಎಂಸಿ ಸುರೇಂದ್ರನ್ ಮುಖ್ಯ ಅತಿಥಿಗಳಾಗಿರುವರು. ಪಂ.ಉಪಾಧ್ಯಕ್ಷೆ ರಮ್ಲ ಇಬ್ರಾಹಿಂ,ಸಿಡಿಎಸ್ ಅಧ್ಯಕ್ಷೆ ಜಲಜಾಕ್ಷಿ ಜಿ.ಪಂ.ಸದಸ್ಯ ನಾರಾಯಣ ನಾಯ್ಕ್, ಬ್ಲೋಕ್ ಪಂ.ಸದಸ್ಯರಾದ ಬಟ್ಟು ಶೆಟ್ಟಿ, ಅನಿಲ್ ಕುಮಾರ್ ಕೆ.ಪಿ, ಪಂ.ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷರುಗಳು,ಜನಪ್ರತಿನಿಧಿಗಳು ಭಾಗವಹಿಸುವರು.

Post a Comment

0 Comments