ಮಂಜೇಶ್ವರ : ತಲಪಾಡಿ ಗಡಿ ಭಾಗದಲ್ಲಿ ಕೇರಳ ಲಾಟರಿ ಸ್ಟಾಲ್ ಸ್ಥಾಪಿಸಿ ಮಾರಾಟ ಮಾಡುತ್ತಿದ್ದವರನ್ನು ಕರ್ನಾಟಕ ಪೋಲಿಸರು ಎಬ್ಬಿಸಲು ನಡೆಸಿದ ಷಡ್ಯಂತ್ರದ ವಿರುದ್ಧ ಸಿಐಟಿಯು ನೇತಾರರು ರಂಗಕ್ಕಿಳಿದು ತೆರವು ಪ್ರಕರಣವನ್ನು ಜಿಲ್ಲಾಡಳಿತ ಅನುಮತಿಯೊಂದಿಗೆ ನಿಲ್ಲಿಸಿರುವುದಾಗಿ ತಿಳಿದು ಬಂದಿದೆ. ಕರ್ನಾಟಕ ಪೋಲಿಸರು ಇಲ್ಲಿನ ಲಾಟರಿ ಸ್ಟಾಲ್ ನವರಿಗೆ ಜು.4ಕ್ಕೆ ಕೊನೆಗೊಳಿಸುವಂತೆ ಸೂಚನೆ ನೀಡಿದ್ದರು ಈ ಬಗ್ಗೆ ಲಾಟರಿ ಮಾರಟಗಾರರು ಸಿಐಟಿಯು ನೇತಾರರಾದ ಪ್ರಶಾಂತ್ ಕನಿಲ ಅವರನ್ನು ಸಂಪರ್ಕಿಸಿದ್ದು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಅವಲೋಕಿಸಿ ಸ್ಥಳೀಯಾಡಳಿತ ಹಾಗೂ ಸಂಬಂಧಪಟ್ಟ ಪೋಲಿಸ್ ಇಲಾಖೆಗೆ ಈ ಬಗ್ಗೆ ಮನವರಿಕೆ ಮಾಡಿ ತೆರವುಗೊಳಿಸದೆ ಲಾಟರಿ ಮಾರಾಟ ಮಾಡಿ ಬದುಕುವ ಬಡ ಕುಟುಂಬಗಳನ್ನು ರಕ್ಷಿಸುವಂತೆ ಆಗ್ರಹಿಸಿದ್ದರು. ಇದಕ್ಕಾಗಿ ಲಾಟರಿ ಮಾರಾಟಗಾರರು ಕೃತಜ್ಞತೆ ಸಲ್ಲಿಸಿದ್ದಾರೆ.

.jpeg)
0 Comments