ಪೆರ್ಲ : ಎಣ್ಮಕಜೆ ಪಂಚಾಯತಿನ ಶೇಣಿ ಎಂಬಲ್ಲಿಂದ ಒಂದೇ ಪ್ರದೇಶದ ನಾಲ್ಕು ಪಂಪುಗಳು ಕಳಗೀಡಾದ ಘಟನೆ ಬೆಳಕಿಗೆ ಬಂದಿದೆ. ಶೇಣಿ ಸದಾಶಿವ ಆಚಾರ್ಯರ ಎರಡು ಪಂಪು, ರಘರಾಮ ಬೋರ್ಕರ್ ಮತ್ತು ಅಬ್ದುಲ್ಲ ಅವರ ತಲಾ ಒಂದೊಂದು ಪಂಪು ಕಳವುಗೈದ ಬಗ್ಗೆ ಬದಿಯಡ್ಕ ಪೋಲಿಸ್ ಠಾಣೆಗೆ ದೂರು ನೀಡಲಾಗಿದೆ. ಬೇಸಿಗೆಯಲ್ಲಿ ತೋಟಗಳಿಗೆ ನೀರು ಬಿಡಲು ಉಪಯೋಗಿಸುತ್ತಿದ್ದ ಪಂಪ್ ಗಳನ್ನು ಇಲ್ಲಿನ ತೋಟದ ಶೆಡ್ ಹಾಗೂ ಜನ ವಾಸ ಇಲ್ಲದ ಮನೆಯೊಳಗೆ ಇರಿಸಲಾಗಿತ್ತು.ಈ ನಡುವೆ ನಿನ್ನೆ ಸ್ಥಳಕ್ಕೆ ತೆರಳಿದ ಪಂಪಿನ ವಾರೀಸುದಾರರಿಗೆ ಸ್ಥಳದಲ್ಲಿದ್ದ ಪಂಪ್ ಗಳನ್ನು ಕಳವುಗೈದ ಬಗ್ಗೆ ತಿಳಿದು ಬಂದಿತ್ತು. ಒಟ್ಟು ನಾಲ್ಕು ಪಂಪ್ ಗಳಿಗೆ ಸುಮಾರು 80 ಸಾವಿರ ಬೆಲೆ ಬಾಳುವುದೆಂದು ಸಂಬಂಧಪಟ್ಟವರು ತಿಳಿಸಿದ್ದಾರೆ. ಈ ಬಗ್ಗೆ ಬದಿಯಡ್ಕ ಪೋಲಿಸರು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಈ ನಡುವೆ ಕಳೆದ ವಾರ ಇಲ್ಲಿಯೇ ಸಮೀಪ ಪ್ರದೇಶವಾದ ಮಣಿಯಂಪಾರೆಯ ಮನೆಯೊಂದೊಳಗಿರಿಸಿದ ಅಡಿಕೆ ಕಳವುಗೈದ ಘಟನೆಯೂ ನಡೆದಿತ್ತು. ಇದೀಗ ಸಂಶಯಾಸ್ಪದ ಕಳ್ಳರ ಜಾಡು ಹಿಡಿದು ಪೋಲಿಸರು ತನಿಖೆ ತೀವ್ರಗೊಳಿಸಿದ್ದಾರೆ.


0 Comments