ಎಣ್ಮಕಜೆ ಮಂಡಲ ಕಾಂಗ್ರೆಸ್ಸಿನಿಂದ ಸಿ.ಸಂಜೀವ ರೈಗೆ ಸನ್ಮಾನ

 


ಪೆರ್ಲ : ಕಾಂಗ್ರೆಸ್ಸಿನ ಹಿರಿಯ ಮುಖಂಡ, ಮಾಜಿ ಜಿ.ಪಂ.ಸದಸ್ಯ ಸಿ.ಸಂಜೀವ ರೈ ಕೆಂಗಣಾಜೆ ಅವರನ್ನು ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಪಕ್ಷದ ವಯೋವೃದ್ಧರಾದ ಹಿರಿಯ ಮುಂದಾಳು ಎಂಬ ನೆಲೆಯಲ್ಲಿ ಅವರ ಮನೆಗೆ ತೆರಳಿ ಸನ್ಮಾನಿಸಲಾಯಿತು.ಮಂಡಲ ಕಾಂಗ್ರೆಸ್ ಅಧ್ಯಕ್ಷ ಬಿ.ಎಸ್.ಗಾಂಭೀರ್ ಅಧ್ಯಕ್ಷತೆವಹಿಸಿದ್ದರು. ಡಿಸಿಸಿ ಪ್ರ.ಕಾರ್ಯದರ್ಶಿ ಸೋಮಶೇಖರ್ ಜೆ.ಎಸ್. ಪಕ್ಷದ ಮುಂದಾಳುಗಳಾದ ಮಿತ್ತೂರು ಪುರುಷೋತ್ತಮ ಭಟ್, ಅಮು ಅಡ್ಕಸ್ಥಳ, ನ್ಯಾಯವಾದಿ ಸುಧಾಕರ ರೈ, ಹರಿಪ್ರಸಾದ್ ಶೆಟ್ಟಿ, ಲೋಕನಾಥ ಶೆಟ್ಟಿ ಮಾಯಿಲೆಂಗಿ, ಮಾಯಿಲ ನಾಯಕ್, ಅಬ್ದುಲ್ ರಸಾಕ್, ಅಬ್ದುಲ್ ಕರೀಂ, ತುಕರಾಮ ಕಾಟುಕುಕ್ಕೆ ಮೊದಲಾದವರು ಭಾಗವಹಿಸಿದ್ದರು.

Post a Comment

0 Comments