ಎಣ್ಮಕಜೆ ಮಂಡಲ ಕಾಂಗ್ರೆಸ್ಸಿನಿಂದ ಬೊಲ್ಕಿನಡ್ಕದ ಥೋಮಸ್ ಡಿಸೋಜರಿಗೆ ಸನ್ಮಾನ


 ಪೆರ್ಲ : ಕಾಂಗ್ರೆಸ್ಸಿನ ಹಿರಿಯ ಕಾರ್ಯಕರ್ತ ಥೋಮಸ್ ಡಿಸೋಜ ಬೊಲ್ಕಿನಡ್ಕ  ಅವರನ್ನು ಎಣ್ಮಕಜೆ ಮಂಡಲ ಕಾಂಗ್ರೆಸ್ ವತಿಯಿಂದ  ಅವರ ಮನೆಗೆ ತೆರಳಿ ಸನ್ಮಾನಿಸಲಾಯಿತು. ಮಂಡಲ ಕಾಂಗ್ರೆಸ್ ಅಧ್ಯಕ್ಷ ಬಿ.ಎಸ್.ಗಾಂಭೀರ್ ಅಧ್ಯಕ್ಷತೆವಹಿಸಿದ್ದರು. 


ಡಿಸಿಸಿ ಪ್ರ.ಕಾರ್ಯದರ್ಶಿ ಸೋಮಶೇಖರ್ ಜೆ.ಎಸ್.
ಅವರು ಮಾತನಾಡುತ್ತಾ ಒಂದು ಬಾರಿ ಚುನಾವಣೆಯ ವೇಳೆ ದೂರದ ಗುಜರಾತ್ ನಲ್ಲಿದ್ದ ಥೋಮಸ್ ಡಿಸೋಜರು ತಮ್ಮ‌ಪೌರತ್ವದ ಹಕ್ಕನ್ನು ಚಲಾಯಿಸಲು ಸ್ವತಃ ಪ್ಲೈಟ್ ಖರ್ಚು ವೆಚ್ಚ ನಿಭಾಯಿಸಿ ಊರಿಗೆ ಆಗಮಿಸಿ ಮರಳಿದ ಘಟನೆಯ ಬಗ್ಗೆ   ಕಾಂಗ್ರೆಸ್ ಪಕ್ಷದ ಅಭಿಮಾನವನ್ನು ತೋರ್ಪಡಿಸಿದ ಅವರ ಕುಟುಂಬದ ಬಗ್ಗೆ ವಿವರಿಸಿದರು.
ಪಕ್ಷದ ಮುಂದಾಳುಗಳಾದ ಅಮು ಅಡ್ಕಸ್ಥಳ, ರವೀಂದ್ರನಾಥ ನಾಯಕ್ ಶೇಣಿ,ಎಸ್.ಯು.ಅಬ್ದುಲ್ಲ, ಅಬ್ದುಲ್ ರಸಾಕ್, ನೌಷದ್ ಶೇಣಿ,  ಕರೀಂ ಕಾಟುಕುಕ್ಕೆ, ರಾಜು ಜೋನ್ ಡಿ.ಸೋಜ ಎಣ್ಮಕಜೆ,ಡೇವಿಡ್ ಡಿಸೋಜ,   ಮೊದಲಾದವರು ಭಾಗವಹಿಸಿದ್ದರು.

Post a Comment

0 Comments