ಬದಿಯಡ್ಕದಲ್ಲಿ ಜಯರಾಮ ಸುವರ್ಣ ಸಂಭ್ರಮ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ

 


ಬದಿಯಡ್ಕ : ನವೆಂಬರ್ 10  ರಂದು ನಡೆಯಲಿರುವ ಜಯರಾಮ ಸುವರ್ಣ ಸಂಭ್ರಮದ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಮತ್ತು ನಿಧಿ ಸಂಚಯನ ಕಾರ್ಯಕ್ರಮವು ಸಂಸ್ಕೃತಿ ಭವನದಲ್ಲಿ ಜರಗಿತು.

ಸಂಜೀವ ಶೆಟ್ಟಿ ಮೊಟ್ಟೆಕುಂಜ ಅವರ ಅಧ್ಯಕ್ಷತೆಯಲ್ಲಿ  


ನಾರಾಯಣ ಮಾಸ್ಟರ್ ದೇಲಂಪಾಡಿ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಹರಿನಾರಾಯಣ ಮಾಸ್ತರ್ ಶಿರಂತಡ್ಕ ಆಮಂತ್ರಣ ಪತ್ರಿಕೆ ಬಿಡುಗಡೆಗೈದರು.

ಈ ಸಂದರ್ಭದಲ್ಲಿ ತಂತ್ರಿ ಶ್ರೀ ಗಣಾದಿ ರಾಜ ಉಪಧ್ಯಾಯ  ಉಪಸ್ಥಿತರಿದ್ದರು.  ಮನೋಹರ ಬಲ್ಲಾಳ್ ಅಡ್ವಾಳ,ರಘು ಕಲ್ಕಾರ್,ಬದಿಯಡ್ಕ ಗ್ರಾ.ಪಂ.ಸದಸ್ಯ ಈಶ್ವರ ಮಾಸ್ತರ್, ಉಡುಪಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಗಣೇಶ್ ಆಚಾರ್ಯ, ಪ್ರೋ. ಶ್ರೀನಾಥ್ ಕೊಲ್ಲಂಗಾನ, ಆನಂದ ಮವ್ವಾರು  ಕಾರ್ಯಕ್ರಮ ದಲ್ಲಿ ಉಪಸ್ಥಿತರಿದ್ದರು. ಪ್ರಧಾನ ಸಂಚಾಲಕ ಅಖಿಲೇಶ್ ನಗುಮುಗಂ , ಕಾರ್ಯಕ್ರಮದ ರೂಪುರೇಖೆ ಮತ್ತು ಅದನ್ನು ಯಶಸ್ವಿಯಾಗಿ ನೆರವೇರಿಸಲು ಕೈಗೊಳ್ಳುವ ಕ್ರಮಗಳ ಕುರಿತು ವಿಶ್ಲೇಷಣೆ ಮಾಡಿದರು. ಸಮಿತಿ ಕೋಶಾಧಿಕಾರಿ ಮುಕುಂದ ರಾಜ್ ಕಾರ್ಯಕ್ರಮಕ್ಕೆ ಸಂಬಂಧಿಸಿದ ಅಂದಾಜು ಖರ್ಚು ವೆಚ್ಚಗಳ  ಮಂಡಿಸಿದರು. 

ಗೋಪಾಲಕೃಷ್ಣ ಕುಲಾಲ್ ವಾಂತಿಚಾಲು ನೇತೃತ್ವದಲ್ಲಿ ಸಹಾಯದ ವಾಗ್ದಾನಗಳನ್ನು ಸ್ವೀಕರಿಸಲಾಯಿತು, ಮತ್ತು ಅನೇಕ ದಾನಿಗಳು ತಮ್ಮ ದೇಣಿಗೆಗಳನ್ನು ಶ್ರದ್ಧಾ ಪೂರ್ವಕವಾಗಿ ನೀಡುವುದಾಗಿ ವಾಗ್ದಾನ ಮಾಡಿದರು. ವಿವಿಧ ನವಜೀವನ ಸಮಿತಿಯವರು ಉಪಸ್ಥಿತರಿದ್ದರು.

ಕು.ವರ್ಷ ಲಕ್ಷಣ ನಾಯ್ಕ ಪ್ರಾರ್ಥನೆಗೈದರು. ಅಶ್ವಿತ್ ಸರಳಾಯ ಸ್ವಾಗತಿಸಿ  ಜಯ ಮಣಿಯಂಪಾರೆ ವಂದಿಸಿದರು.ಸುಂದರ ಕಟ್ನಡ್ಕ  ನಿರೂಪಣೆಗೈದರು.

Post a Comment

0 Comments