ಯಕ್ಷ ಮಿತ್ರರು ದುಬೈಯ"ಬಪ್ಪನಾಡು ಕ್ಷೇತ್ರ ಮಹಾತ್ಮೆ" ಪ್ರಸಂಗದ ಆಮಂತ್ರಣ ಪತ್ರಿಕೆ ಮತ್ತು ಟಿಕೆಟ್ ಬಿಡುಗಡೆ


ದುಬೈ: "ನಾನು ವಿದೇಶದಲ್ಲಿ ಆರಂಭಿಸಿದ  ಉದ್ಯಮದ ಸಂಸ್ಥೆಗೆ ಇಂದು ಇಪತೈದು ವರ್ಷ ಅದೇ ಯಕ್ಷ ಮಿತ್ರರು ದುಬೈ ಸಂಸ್ಥೆಗೆ ಇಪ್ಪತ್ತೊಂದು ವರ್ಷ ಇದೊಂದು ಅವಿರತ ಶ್ರಮದ ದ್ಯೋತಕ. ಕಳೆದ ಇಪ್ಪತ್ತೊಂದು ವರ್ಷದಿಂದ ನನ್ನ ಕೈಲಾದ ಸಹಕಾರವನ್ನು ನೀಡುತ್ತ ಬಂದಿದ್ದೆನೆ ಇನ್ನೂ ಮುಂದೆಯೂ ನೀಡುವೆ" ಎಂದು


ದುಬೈಯ ಉದ್ಯಮಿ,ಚಿತ್ರ ನಿರ್ಮಾಪಕ ಹರೀಶ್ ಶೇರಿಗಾರ್    ಅವರು ದುಬೈನಲ್ಲಿ ಅಗಸ್ಟ್ 04 ರಂದು ಯಕ್ಷ ಮಿತ್ರರು ದುಬೈಯ ಇವರ 21 ನೇ ವರ್ಷದ "ಯಕ್ಷ ಸಂಭ್ರಮ-2024" ರ ಆಮಂತ್ರಣ ಪತ್ರಿಕೆ ಮತ್ತು ಟಿಕೆಟ್ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡುತ್ತಾ 21 ನೇ ವರ್ಷದ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲಿ ಎಂದು ಶುಭವನ್ನು ಕೋರಿದರು.



          ಯಕ್ಷ ಮಿತ್ರರು ದುಬೈ ಯ "ಯಕ್ಷ ಸಂಭ್ರಮ -2024" ಕಾರ್ಯಕ್ರಮದ ಅಂಗವಾಗಿ ಸೆಪ್ಟೆಂಬರ್15 ಆದಿತ್ಯವಾರದಂದು ಎಮಿರೆಟ್ಸ್ ಥಿಯೇಟರ್ ಜುಮೇರದಲ್ಲಿ ಪ್ರದರ್ಶನಗೊಳ್ಳಲಿರುವ 21ನೇ ವರ್ಷದ "ಬಪ್ಪನಾಡು ಕ್ಷೇತ್ರ ಮಹಾತ್ಮೆ"  ಪ್ರಸಂಗದ ಆಮಂತ್ರಣ ಪತ್ರಿಕೆ ಮತ್ತು ಟಿಕೆಟ್ ಬಿಡುಗಡೆ  ಸಮಾರಂಭವು ನಗರದ ಬಿರಿಯಾನಿ 2020 ಹೋಟೆಲ್ ನ ಸಭಾಂಗಣದಲ್ಲಿ ನಡೆಯಿತು.ಯಕ್ಷಮಿತ್ರರು ಸಂಸ್ಥೆಯ ಬಾಲಕಲಾವಿದರಿಂದ ಗಣಪತಿ ದೇವರ ಸ್ತುತಿಯೊಂದಿಗೆ ಪ್ರಾರಂಭವಾದ ಸಭಾ ಕಾರ್ಯಕ್ರಮದಲ್ಲಿ 

 



ಉದ್ಯಮಿಗಳಾದ  ವಾಸುದೇವ ಭಟ್ ಪುತ್ತಿಗೆ, ಹರೀಶ್ ಶೇರಿಗಾರ್ ,ಹರೀಶ್ ಬಂಗೇರ,  ದಿವಾಕರ ಶೆಟ್ಟಿ,ಪದ್ಮರಾಜ್ ಎಕ್ಕಾರ್ ,ಜೇಮ್ಸ್ ಮೆಂಡೋನ್ಸ,ಕರ್ನಾಟಕ ಸಂಘ ಶಾರ್ಜಾದ ಅಧ್ಯಕ್ಷರಾದ ಸತೀಶ್ ಪೂಜಾರಿ,ಕರ್ನಾಟಕ ಸಂಘ ದುಬೈಯ ಅಧ್ಯಕ್ಷರಾದ ಶಶಿಧರ್ ನಾಗರಾಜಪ್ಪ, ನೋವೆಲ್ ಅಲ್ಮೆಡ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಆಮಂತ್ರಣ ಪತ್ರಿಕೆ ಮತ್ತು ಟಿಕೆಟ್ ಬಿಡುಗಡೆಗೊಳಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.





 ದುಬೈಯ ವಿವಿಧ  ಸಂಘಟನೆಗಳ ಪದಾಧಿಕಾರಿಗಳಾದ ರಘುರಾಮ ಶೆಟ್ಟಿಗಾರ್,ಮನೋಹರ್ ಹೆಗ್ಡೆ,ಸತೀಶ್ ಉಳ್ಳಾಲ್,ಅಶ್ವಥ್,ವಿಶ್ವನಾಥ ಶೆಟ್ಟಿ, ಸಂದೀಪ್ ಕೋಟ್ಯನ್,ದೀಪಕ್ ಎಸ್.ಪಿ,ಶ್ರೀಮತಿ ಜಶ್ಮೀತಾ ವಿವೇಕ್,ಬಾಲಕೃಷ್ಣ ಸಾಲಿಯಾನ್,ಬಾಲಕೃಷ್ಣ ಶೆಟ್ಟಿಗಾರ್,ಸಂತೋಷ್ ಶೆಟ್ಟಿ ಪೊಳಲಿ,ದಿವೇಶ್ ಉದ್ಯಾವರ,ಪದ್ಮನಾಭ ಕಟೀಲ್ ಕಾರ್ಯಕ್ರಮಕ್ಕೆ ಶುಭವನ್ನು ಹಾರೈಸಿದರು.ಹಾಗೂ ಸಂಸ್ಥೆಯ ಹಿರಿಯ ಸದಸ್ಯರುಗಳಾದ ಚಿದಾನಂದ ಪೂಜಾರಿ, ದಯಾ ಕಿರೋಡಿಯನ್,ಜಯಂತ್ ಶೆಟ್ಟಿ, ಅಶೋಕ್ ತೊನ್ಸೆ ಮತ್ತು ಸರ್ವ ಸದಸ್ಯರು ಉಪಸ್ಥಿತರಿದ್ಧು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

      ತೆಂಕುತಿಟ್ಟಿನ  ಪ್ರಸಿದ್ಧ ಭಾಗವತರಾದ  ಗಣೇಶ್ ಭಟ್ ಹೊಸಮೂಲೆ,ಚೆಂಡೆ  ಮದ್ದಳೆಯಲ್ಲಿ ದೇಲಂತಮಜಲು ಸುಭ್ರಮಣ್ಯ ಭಟ್, ಲೋಕೇಶ್ ಕಟೀಲು, ಹಾಗೂ ಮುಮ್ಮೇಳದಲ್ಲಿ ರಾಧಾಕೃಷ್ಣ ನಾವಡ ಮಧೂರು, ಮಹೇಶ್ ಕುಮಾರ್ ಸಾಣೂರು, ಶಿವರಾಜ್ ಬಜಕೂಡ್ಲು,ಭುವನ್ ಶೆಟ್ಟಿ ಬೋಳಾರ ವೇಷಭೂಷಣದಲ್ಲಿ ಜಯಂತ್ ಪೈವಳಿಕೆ,ಮತ್ತು ಯಕ್ಷಮಿತ್ರರು ದುಬೈಯ ಕಲಾವಿದರ ಕೂಡುವಿಕೆಯೊಂದಿಗೆ, ಯಕ್ಷಗುರುಗಳಾದ ಕಿಶೋರ್ ಗಟ್ಟಿ ಇವರ ದಕ್ಷ ನಿರ್ದೇಶನದಲ್ಲಿ ಬಪ್ಪನಾಡು ಕ್ಷೇತ್ರ ಮಹಾತ್ಮೇ ಪ್ರಸಂಗವು ಪ್ರದರ್ಶನಗೊಳ್ಳಲಿದೆ.

       ಸಂಸ್ಥೆಯ ಸದಸ್ಯರಾದ ರಿತೇಶ್ ಅಂಚನ್ ಕುಲಶೇಖರ ಇವರು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿ ಧನ್ಯವಾದವಿತ್ತರು.

ವರದಿ: ವಿಜಯಕುಮಾರ್ ಶೆಟ್ಟಿ ಗಾಣದಮೂಲೆ ಮಜಿಬೈಲ್ (ದುಬೈ)

ಚಿತ್ರ : ಅಶೋಕ್ ಬೆಳ್ಮಾನ್ (ದುಬೈ)

Post a Comment

0 Comments