ಕುಂಬಳೆ: ಕ್ಯಾಂಪ್ಕೋ ಸಂಸ್ಥೆಯ ಸಾಂತ್ವನ ಯೋಜನೆಯಡಿಯಲ್ಲಿ ಕ್ಯಾಂಪ್ಕೋ ನೀರ್ಚಾಲ್ ಶಾಖೆಯ ಸಕ್ರಿಯ ಸದಸ್ಯ ಮಹಾಲಿಂಗೇಶ್ವರ ಪಿ ಎ ಅವರಿಗೆ ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆ ಗೆ ರೂಪಾಯಿ 3 ಲಕ್ಷ ಮೊತ್ತದ ಸಹಾಯಧನವನ್ನು ಕ್ಯಾಂಪ್ಕೋ ವತಿಯಿಂದ ಶನಿವಾರ ಅವರ ಮನೆಗೆ ತೆರಳಿ ಸಂಸ್ಥೆಯ ಉಪಾಧ್ಯಕ್ಷ ಶಂಕರನಾರಾಯಣ ಭಟ್ಟ ಖಂಡಿಗೆ ಹಸ್ತಾಂತರಿಸಿದರು. ನಿರ್ದೇಶಕರುಗಳಾದ ಸುರೇಶ್ ಕುಮಾರ್ ಶೆಟ್ಟಿ ಪೂಕಟ್ಟೆ, ಪ್ರಾದೇಶಿಕ ವ್ಯವಸ್ಥಾಪಕ ಚಂದ್ರ ಎಂ., ನೀರ್ಚಾಲು ಶಾಖಾ ವ್ಯವಸ್ಥಾಪಕ ಗಣೇಶ್, ಸುರೇಶ್ ಶೆಟ್ಟಿ ಪರಂಕಿಲ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
0 Comments