ಪೆರ್ಲ :ಗೋಳಿತ್ತಾರು ಶ್ರೀ ಸಿದ್ಧಿವಿನಾಯಕ ಭಜನ ಮಂದಿರದಲ್ಲಿ ಸಮಿತಿ ವತಿಯಿಂದ 36ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಮಹೇಶ್ ಉಪಾಧ್ಯಾಯರ ನೇತೃತ್ವದಲ್ಲಿ ವಿವಿಧ ಧಾರ್ಮಿಕ, ಕ್ರೀಡಾ ಕಾರ್ಯಕ್ರಮಗಳೊಂದಿಗೆ ನಡೆಯಿತು. ಬೆಳಿಗ್ಗೆ ಗಣಪತಿ ಹವನ, ಭಜನೆ ಬಳಿಕ ವಿವಿಧ ಸ್ಪರ್ಧೆಗಳು ನಡೆಯಿತು.ಮಧ್ಯಾಹ್ನ ಮಹಾ ಪೂಜೆ, ಅನ್ನ ಸಂತರ್ಪಣೆ ನಡೆಯಿತು.ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಸಮಿತಿ ಅಧ್ಯಕ್ಷರಾದ ಕಮಲಾಕ್ಷ ಪೂಜಾರಿ ಅಧ್ಯಕ್ಷತೆ ವಹಿಸಿದರು.ಪೃಥ್ವಿರಾಜ್ ಬಾಡೂರು, ಸತೀಶ್ ಮಂಟಪ್ಪಾಡಿ ಅತಿಥಿಗಳಾಗಿದ್ದರು.ಸಮಿತಿ , ಸದಸ್ಯರಾದ ಜನಾರ್ಧನ ರೈ ಸೇರಾಜೆ ಮಾತನಾಡಿದರು.ಬಾಬು ಪೂಜಾರಿ ಕಾನ,ದಿವಾಕರ ನಾಯಕ್ ಇಡ್ಯಾಳ, ಸಂಕಪ್ಪ ಶೆಟ್ಟಿ ಸೇರಾಜೆ ಸಹಿತ ಹಲವರು ಉಪಸ್ಥಿತರಿದ್ದರು. ಜಯಂತ ಸೇರಾಜೆ ಸ್ವಾಗತಿಸಿ,ಕಾರ್ಯದರ್ಶಿ ವಿನೀತ್ ವಂದಿಸಿ, ರವಿ ಎಸ್ ಎಂ ನಿರೂಪಿಸಿದರು.ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು , ಭಜನೆ ಮಂಗಳದೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು .


0 Comments