ಪೆರ್ಲ: ಎಣ್ಮಕಜೆ ಪಂಚಾಯತು ಬಂಟ್ಸ್ ಸರ್ವೀಸ್ ಸೊಸೈಟಿಯಿಂದ ಬಂಟರಕೂಟ ಕಾರ್ಯಕ್ರಮ ಇಡಿಯಡ್ಕ ಕ್ಷೇತ್ರ ಸಭಾಂಗಣದಲ್ಲಿ ಸೆ.22ಕ್ಕೆ ಜರುಗಲಿದೆ.
ಇದರ ಅಂಗವಾಗಿ ಬೆಳಿಗ್ಗೆ ಧ್ವಜಾರೋಹಣ, ಭಜನೆ, ಕುಣಿತ ಭಜನೆ,ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಲಿದೆ. ಮಧ್ಯಾಹ್ನ 2 ಗಂಟೆಯ ಬಳಿಕ ಜರಗುವ ಸಭಾ ಕಾರ್ಯಕ್ರಮದಲ್ಲಿ ಸುಧೀರ್ ಕುಮಾರ್ ಶೆಟ್ಟಿ ಎಣ್ಮಕಜೆ ,ನಾಟಿ ವೈದ್ಯೆ ನಳಿನಿ ಕುಂಬತ್ತೊಟ್ಟಿ,ನಿವೃತ್ತ ಸೈನಿಕ ಚಂದ್ರಶೇಖರ ರೈ ಬಾಳೆಮೂಲೆ ಅವರನ್ನು ಸನ್ಮಾನಿಸಲಾಗುತ್ತದೆ. ಈ ಸಂದರ್ಭದಲ್ಲಿ ಎಸ್ಸಸ್ಸೆಲ್ಸಿ ಹಾಗೂ ಪ್ಲಸ್ ಟು ವಿಭಾಗದಲ್ಲಿ 600ಕ್ಕಿಂತ ಅಧಿಕ ಮಾರ್ಕ್ ಗಳಿಸಿದ ಬಂಟ ಸಮಾಜದ ಮಕ್ಕಳನ್ನು ಅಭಿನಂದಿಸಲಾಗುತ್ತದೆ ಎಂದು ಬಂಟ್ಸ್ ಸರ್ವೀಸ್ ಸೊಸೈಟಿ ಕಾರ್ಯದರ್ಶಿ ಶರತ್ಚಂದ್ರ ಶೆಟ್ಟಿ ಶೇಣಿ ಪತ್ರಿಕಾ ಪ್ರಕಟಣೆಗೆ ತಿಳಿಸಿದ್ದಾರೆ.


0 Comments