ಕಾಸರಗೋಡು : ಕಾಳ್ಯಂಗಾಡು ಶ್ರೀ ಮೂಕಾಂಬಿಕಾ ಕ್ಷೇತ್ರದ ಜೀರ್ಣೋದ್ಧಾರ ಸಮಿತಿ ಹಾಗೂ ಊರಿನ ಭಕ್ತ ಜನರ ಸಭೆ ಜರಗಿತು. ನವರಾತ್ರಿ ಮಹೋತ್ಸವ ಕಳೆದ ಕೂಡಲೇ ಶ್ರೀ ಕ್ಷೇತ್ರದ ಜಿರ್ಣೋದ್ಧಾರ ಕೆಲಸ ಕಾರ್ಯಗಳನ್ನು ಪ್ರಾರಂಭಿಸುವ ಸಲುವಾಗಿ ದೇವರನ್ನು ಬಾಲಾಲಯದಲ್ಲಿ ಪ್ರತಿಷ್ಠೆ ಮಾಡುವ ವಿಷಯ ಹಾಗೂ ಶಿಲಾನ್ಯಾಸದ ಬಗ್ಗೆ ಸಭೆಯಲ್ಲಿ ಮಹತ್ವದ ತೀರ್ಮಾನ ಕೈಗೊಳ್ಳಲಾಯಿತು.
ಸಭೆಯ ಅಧ್ಯಕ್ಷತೆಯನ್ನು ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಮೋಹನ್ ರಾಜ್ ಕಾಳ್ಯಂಗಾಡು ವಹಿಸಿದ್ದರು, ಸಮಿತಿ ಗೌರವ ಅಧ್ಯಕ್ಷ ಡಾ ಕೆ ಎನ್ ವೆಂಕಟ್ರಮಣ ಹೊಳ್ಳ, ಆಡಳಿತ ಮೊಕ್ತೇಸರ ಅಚ್ಚುತ ಕಾಳ್ಯಂಗಾಡು,ರಾಧಾ, ಶೋಭನ, ನಾರಾಯಣ ಪೂಜಾರಿ, ಲವ ಮೀಪುಗುರಿ, ಗೋವಿಂದ ಎಸ್ ಎಂಎಸ್ ಮೊದಲಾದವರು ಭಾಗವಹಿಸಿದ್ದರು ಪ್ರಧಾನ ಕಾರ್ಯದರ್ಶಿ ಹರೀಶ್ ಕೆ ಆರ್ ಸ್ವಾಗತಿಸಿ ಖಜಾಂಚಿ ಶಾಂತಕುಮಾರ್ ವಂದಿಸಿದರು .


0 Comments