ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದಿಂದ ಪೊಸಡಿ ಗುಂಪೆ ನಿಸರ್ಗಧಾಮದಲ್ಲಿ 'ಕವಿತಾ ಕೌತುಕ'

 


ಪೈವಳಿಕೆ: ಕವಿಗಳ ಸೃಜನಶೀಲತೆಗೆ ಪ್ರೋತ್ಸಾಹ ನೀಡಲು ಮತ್ತು ಹೊಸ ತಲೆಮಾರಿನ ಬರಹಗಾರರನ್ನು ಉತ್ತೇಜಿಸಲು ಕನ್ನಡ ಸಾಹಿತ್ಯ ಪರಿಷತ್ತು ಕೇ ರಳ ಗಡಿನಾಡ ಘಟಕವು ಆರಂಭಿಸಿದ ವಿನೂತನ ಕಾರ್ಯಕ್ರಮ ಕವಿತಾ ಕೌತುಕ ಸರಣಿ ಕಾರ್ಯಕ್ರಮದ ಉದ್ಘಾಟನೆಯು ಪೊಸಡಿ ಗುಂಪೆಯ ನಿಸರ್ಗಧಾಮದಲ್ಲಿ ನಡೆಯಿತು. ನಿಸರ್ಗಧಾಮದ ಮಾಲಕ ಮಾಧವ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು.

    ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಅಧ್ಯಕ್ಷ ಡಾ. ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ ಅಧ್ಯಕ್ಷತೆ ವಹಿಸಿದ್ದರು. ಕವಿಗಳಾದ ಕೆ. ಎ. ಎಂ ಅನ್ಸಾರಿ, ಥೋಮಸ್ ಡಿ. ಸೋಜ, ವನಜಾಕ್ಷಿ ಪಿ. ಚೆಂಬ್ರಕಾನ, ಸೌಮ್ಯ ಪ್ರವೀಣ್, ಹರ್ಷಿತ.ಎಸ್ ಶಾಂತಿಮೂಲೆ,ವಿದ್ಯಾಶ್ರೀ.ಜೆ ಮೊದಲಾದವರು ಕವನವಾಚನ ಮಾಡಿ ತಮ್ಮ ಸಾಹಿತ್ಯ ರಚನೆಯ ಹಿನ್ನೆಲೆ, ಸ್ಫೂರ್ತಿ ಇತ್ಯಾದಿಗಳ ಕುರಿತು ಮಾತನಾಡಿದರು.

  ಪೊಸಡಿಗುಂಪೆ ಪತ್ರಿಕೆಯ ಸಂಪಾದಕ ಜೋನ್ ಡಿ.ಸೋಜ, ಧರ್ಮತ್ತಡ್ಕ ಗ್ರಂಥಾಲಯ ಅಧ್ಯಕ್ಷ  ರವಿಲೋಚನ ಸಿ .ಎಚ್, ಕಸಾಪ ಸಂಘಟನಾ ಕಾರ್ಯದರ್ಶಿ ರಾಮಚಂದ್ರ ಭಟ್.ಪಿ, ಇಂದಿರಾ ರವಿ ಬೆಂಗಳೂರು, ಶ್ರೀಧರ ಕುಂಜತ್ತೂರು ,ಮಾಲತಿ ಕಣ್ಣನ್ ,ರವೀಂದ್ರನಾಥ ಪಾವಲ್ಕೋಡಿ, ಚಂದ್ರಾವತಿ ದಾಮೋದರ ,ಶ್ರೀರಾಮ ಭಟ್ ಭಾಗವಹಿಸಿದ ಕವಿಗಳಿಗೆ ಪ್ರಶಸ್ತಿ ಪತ್ರ ವಿತರಿಸಿದರು.

  ಕಾಸರಗೋಡು ಜಿಲ್ಲಾ ಕನ್ನಡ ಲೇಖಕರ ಸಂಘದ ಅಧ್ಯಕ್ಷ ಪ್ರೊ. ಪಿ. ಎನ್  ಮೂಡಿತ್ತಾ ಯ ಸಮಾರೋಪ ಭಾಷಣ ಮಾಡಿದರು. ಕಾರ್ಯಕ್ರಮಕ್ಕೆ ಸಹಯೋಗ ನೀಡಿದ ಶಂಪಾ ಪ್ರತಿಷ್ಠಾನ ಬೆಂಗಳೂರು ಇದರ ಅಧ್ಯಕ್ಷೆ ಡಾ. ಪ್ರಮೀಳಾ ಮಾಧವ ಸ್ವಾಗತಿಸಿ ಕವನ ವಾಚಿಸಿದರು. ಕಸಾಪ ಸಂಘಟನಾ ಕಾರ್ಯದರ್ಶಿ  ವಿಶಾಲಾಕ್ಷ ಪುತ್ರಕಳ ಕಾರ್ಯಕ್ರಮ ನಿರೂಪಿಸಿ, ಧನ್ಯವಾದ ಸಮರ್ಪಿಸಿದರು.

Post a Comment

0 Comments