ಬದಿಯಡ್ಕ : ಅಂಬೇಡ್ಕರ್ ವಿಚಾರ ವೇದಿಕೆಯ ಆಶ್ರಯದಲ್ಲಿ ಶಿಕ್ಷಕರ ದಿನಾಚರಣೆಯಂಗವಾಗಿ ಪೆರಡಾಲ ನವಜೀವನ ಹೈಸ್ಕೂಲಿನ ನಿವೃತ್ತ ಮುಖ್ಯೋಪಾಧ್ಯಾಯ ಪೆರ್ಮುಖ ಈಶ್ವರ ಭಟ್ ಅವರಿಗೆ ಗೌರವಾಭಿವಂದನೆ ಸಲ್ಲಿಸಲಾಯಿತು.ಅಂಬೇಡ್ಕರ್ ವಿಚಾರ ವೇದಿಕೆಯ ಅಧ್ಯಕ್ಷ ರಾಮಪಟ್ಟಾಜೆ ಅಧ್ಯಕ್ಷತೆವಹಿಸಿದ್ದರು.ಸಾಹಿತಿ,ಪತ್ರಕರ್ತ ರಾಧಾಕೃಷ್ಣ ಕೆ.ಉಳಿಯತ್ತಡ್ಕ ಅಭಿನಂದನಾ ಭಾಷಣಗೈದರು.ವಿಚಾರ ವೇದಿಕೆಯ ಸ್ಥಾಪಕ ಸದಸ್ಯ ನಾರಾಯಣ ಬಾರಡ್ಕ, ನಿವೃತ್ತ ಗ್ರಾಮಾಧಿಕಾರಿ ಕೃಷ್ಣ ಡಿ.ದರ್ಬೆತ್ತಡ್ಕ, ಸಮಾಜ ಸೇವಕ ಗಂಗಾಧರ ಗೋಳಿಯಡ್ಕ, ಕೃಷಿ ಇಲಾಖೆಯ ನಿವೃತ್ತ ವರಿಷ್ಠಾಧಿಕಾರಿ ರಮೇಶ್ ಕರಿಂಬಿಲ, ಶಂಕರ ಸ್ವಾಮಿಕೃಪಾ,ಈಶ್ವರ ಭಟ್ ರ ಧರ್ಮಪತ್ನಿ ಕುಸುಮ ಪೆರ್ಮುಖ ಉಪಸ್ಥಿತರಿದ್ದರು. ಡಾ.ನಾರಾಯಣ ಪ್ರದೀಪ ಸ್ಬಾಗತಿಸಿ ಸುಂದರ ಬಾರಡ್ಕ ವಂದಿಸಿದರು.


0 Comments