ವಿಟ್ಲ : ಕೇಪು ವಲಯದ ಅಡ್ಯನಡ್ಕ ಜನತಾ ಪದವಿಪೂರ್ವ ಕಾಲೇಜು ಮತ್ತು ಪ್ರೌಢಶಾಲೆಯಲ್ಲಿ ಸ್ವಾಸ್ತ್ಯ ಸಂಕಲ್ಪ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಕಾಲೇಜು ಪ್ರಾಂಶುಪಾಲರಾದ ಶ್ರೀನಿವಾಸ ದೇಳಂತಬೆಟ್ಟು ಮತ್ತು ಮುಖ್ಯಉಪಾಧ್ಯರಾದ ಟಿ. ಆರ್. ನಾಯಕ್ ನಡೆಸಿದರು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಅಳಿಕೆ ವಲಯದ ಜನಜಾಗೃತಿ ಅಧ್ಯಕ್ಷರಾದ ಬಾಲಕೃಷ್ಣ ಕಾರಂತ ರವರು ಮಾತನಾಡಿ ಶಾಲಾ ಮಕ್ಕಳು ಪ್ರಸ್ತುತ ದಿನದಲ್ಲಿ ಅತೀ ಹೆಚ್ಚು ದುಶ್ಚಟಕ್ಕೆ ಬಳಿ ಆಗುತ್ತಿರುವುದು ತುಂಬಾ ಆಂತಕಕಾರಿ ಬೆಳವಣಿಗೆ ಈ ಬಗ್ಗೆ ಮಕ್ಕಳು ಜಾಗರುಕರಾಗಿ ಇರಬೇಕು. ಸಮಾಜದಲ್ಲಿ ಸಜ್ಜನರ ಸಹವಾಸ, ಒಳ್ಳೆಯ ಸ್ನೇಹಿತರೆ ಸಹವಾಸ ಮಾಡಿ ದುಶ್ಚಟಕ್ಕೆ ಬಳಿ ಆಗದಂತೆ ತಿಳಿಸಿದರು.
ವೇದಿಕೆಯಲ್ಲಿ ಕೇಪು ವಲಯದ ಜನಜಾಗೃತಿ ಅಧ್ಯಕ್ಷರಾದ ರಾಧಾಕೃಷ್ಣ ಚೆರ್ಲಡ್ಕ ಉಪಸ್ಥಿತರಿದ್ದು ಶುಭ ಹಾರೈಯಿಸಿದರು. ಅಧ್ಯಕ್ಷತೆಯನ್ನು ಅಡ್ಯನಡ್ಕ ಒಕ್ಕೂಟದ ಅಧ್ಯಕ್ಷರಾದ ಪುಷ್ಪಕರ ರೈ ವಹಿಸಿದ್ದರು. ವಲಯದ ಮೇಲ್ವಿಚಾರಕರಾದ ಜಗದೀಶ್ ಪ್ರಸ್ತಾವಿಕ ಮಾತನಾಡಿದರು. ವಿಭಾಗ ಸೇವಾಪ್ರತಿನಿಧಿ ಗಾಯತ್ರಿ ಸ್ವಾಗತಿಸಿದರು.
ಉಪನ್ಯಾಸಕರಾದ ಸೋಮಶೇಖರ್ ಕಾರ್ಯಕ್ರಮ ನಿರೂಪಿಸಿದರು.


0 Comments