ವಾಯ್ಸ್ ಆಫ್ ವರ್ಲ್ಡ್ ಮಲಯಾಳಿ ಕೌನ್ಸಿಲ್ "ಗುರು ಶ್ರೇಷ್ಠ" ಪ್ರಶಸ್ತಿಗೆ ರಂಜಿತ್ .ಎ. ಎಸ್ ಪೆರ್ಲ ಆಯ್ಕೆ


ಪೆರ್ಲ : ವಾಯ್ಸ್ ಆಫ್ ವರ್ಲ್ಡ್ ಮಲಯಾಳಿ ಕೌನ್ಸಿಲ್ ಈ ವರ್ಷ ಅಧ್ಯಾಪಕ ದಿನದಂದು ಘೋಷಿಸಿದ "ಗುರು ಶ್ರೇಷ್ಠ" ಪ್ರಶಸ್ತಿಗೆ ಕಾಸರಗೋಡು ಜಿಲ್ಲೆಯಿಂದ ರಂಜಿತ್ .ಎ. ಎಸ್ ಪೆರ್ಲ ಆಯ್ಕೆಗೊಂಡಿದ್ದಾರೆ. 

ಈ ಪ್ರಶಸ್ತಿಯು ತಿರುವನಂತಪುರ ಡಲ್ಲಿ ಜರಗುವ ಸಮಾರಂಭದಲ್ಲಿ ಕೇರಳ ಗವರ್ನರ್ ಶ್ರೀ ಆರೀಫ್ ಮುಹಮ್ಮದ್ ಖಾನ್ ವಿತರಿಸಲಿರುವರು ಎಂದು VWMC ಚೆಯರ್ಮೆನ್ ಅಜಿತ್ ಪಿಳ್ಳೈ ತಿಳಿಸಿದ್ದಾರೆ.

ಪ್ರಸ್ತುತ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡಿನಲ್ಲಿ ಅದ್ಯಾಪಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ರಂಜಿತ್ ಅವರು ಕೇರಳ ಪೊಲೀಸ್ ಸೇವೆಯಲ್ಲಿ ಸರಕಾರಿ  ಸೇವೆಗೆ ಸೇರಿಕೊಂಡಿದ್ದರು.ಬಳಿಕ 2012 ರಲ್ಲಿ ಜಿ.ಯೆಚ್.ಎಸ್.ಎಸ್ ಪಾಂಡಿಯಲ್ಲಿ ಅಧ್ಯಾಪಕ ಸೇವೆಗೆ ನಿಯುಕ್ತಿಗೊಂಡರು. ಕ್ರೀಡೆ,ಕಲೆ,ಸಾಮಾಜಿಕ,ಸಾಂಸ್ಕೃತಿಕ,ಕ್ರೀಡಾ ಒಕ್ಕೂಟಗಳ ಸಂಯೋಜನೆ,ಮುಂತಾದ ಅಂಶಗಳನ್ನು ಇಟ್ಟುಕೊಂಡು ಇವರನ್ನು ಆಯ್ಕೆಮಾಡಲಾಗಿದೆ ಎಂದು ಸಂಬಂಧಪಟ್ಟವರು ತಿಳಿಸಿದ್ದಾರೆ.  

ಕಳೆದ 12 ವರ್ಷಗಳಿಂದ ಕೇರಳ ರಾಜ್ಯ ಶಾಲಾ ಕ್ರೀಡೋತ್ಸವ ಗಳಲ್ಲಿ ಗನ್ ಸ್ಟಾ ಟರ್ ಆಗಿ ಪ್ರಸಿದ್ಧ ಕ್ರೀಡಾ ತೀರ್ಪುಗಾರ ಕುಂಞಿರಾಮ ಮಾಸ್ಟರ್ ರ ಶಿಷ್ಯತನ ವನ್ನು ಹೊಂದಿರುತ್ತಾರೆ.ಕೇರಳ ಪೊಲೀಸ್ ಜಿಲ್ಲಾಮಟ್ಟದ ಕ್ರೀಡಾ ಸ್ಪರ್ಧೆಯ ,ಹಗ್ಗಜಗ್ಗಾಟ ದ ಕಾಯಂ ತೀರ್ಪುಗಾರರಾಗಿದ್ದಾರೆ.ಕೆಲವು ವರ್ಷಗಳಿಂದ ಕೇಂದ್ರೀಯ ವಿಶ್ವ ವಿದ್ಯಾನಿಲಯ,ಚಂದ್ರಗಿರಿ ಸಹೋದಯ ಕ್ರೀಡಾಕೂಟ,ಜಿಲ್ಲಾ  ಅಮೇಚುರ್ ಕ್ರೀಡಾಕೂಟ,ರಾಜ್ಯ ಸಿವಿಲ್ ಕ್ರೀಡಾ ಒಕ್ಕೂಟ, ಗಳ ಗನ್ ಸ್ಟಾಟರ್ ಆಗಿ ಪ್ರಸಿದ್ಧಿ ಹೊಂದಿದ್ದಾರೆ. ರಾಷ್ಟ ಮಟ್ಟದ ಕ್ರೀಡಾಕೂಟದಲ್ಲಿಯೂ ಸೇವೆ ಸಲ್ಲಿಸಿದ್ದಾರೆ.

ಇಂಡಿಯನ್ ಪೌಂಢೇಶನಗ  ಆಫ್ ಆರ್ಟ್ಸ್ ಬೆಂಗಳೂರು ಮತ್ತು ರಂಗ ಚೇತನ ಕಾಸರಗೋಡು ಇದರ ಸದಸ್ಯರಾಗಿರುವ ಇವರು ,"ಪಾಟ್ನಾರ್ಸ್" ಮತ್ತು "ಪೋರಾಟ್ ನಾಡಕಂ"ಎಂಬ ಎರಡು ಮಲಯಾಳಂ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.

ಪೆರ್ಲ ಅಪ್ಪಯಮೂಲೆ ನಿವಾಸಿ ,ಕಲಾವಿದ ಸುಂದರ ಅಪ್ಪ ಯಮೂಲೆ,ನಿವೃತ್ತ ಪಶುಸಂಗೋಪನಾ ಇಲಾಖೆ ಉದ್ಯೋಗಿ ಸುಶೀಲ ಕೊರತಿ ದಂಪತಿ ಪುತ್ರರಾದ ರಂಜಿತ್ ಎಣ್ಮಕಜೆ ಪಂಚಾಯತ್ ಪಡ್ರೆ ಗ್ರಾಮ ಅಪ್ಪಯಮೂಲೆ ಯಲ್ಲಿ ಪತ್ನಿ ಸವಿತಾ ಪರಕ್ಕಿಲ,ಮಗಳು ಆಯುಷ್ಮಿತ ಆರ್ ಶೌರಿ ಯೊಂದಿಗೆ ಸಂತೃಪ್ತ ಜೀವನ ನಡೆಸುತ್ತಿದ್ದಾರೆ.

Post a Comment

0 Comments