ವಿಟ್ಲ : ತಾಲೂಕಿನ ಕೇಪು ವಲಯದ ಮಾಣಿಲ ಸರಕಾರಿ ಪ್ರೌಢಶಾಲೆಯಲ್ಲಿ ಸ್ವಾಸ್ತ್ಯ ಸಂಕಲ್ಪ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಒಕ್ಕೂಟದ ಅಧ್ಯಕ್ಷರಾದ ಕೃಷ್ಣ ಮೂಲ್ಯ ನಡೆಸಿದರು. ಸಂಪನ್ಮೂಲ ವ್ಯಕ್ತಿಯಾಗಿಆಗಮಿಸಿದ ಜ್ಞಾನದೀಪ ಶಿಕ್ಷಕಿ, ನಿರೂಪಕಿ ಶ್ರೀಮತಿ ರೇಣುಕಾ ಕಣಿಯೂರ್ ರವರು ಮಾತನಾಡಿ ಶಾಲಾ ಮಕ್ಕಳು ಪ್ರಸ್ತುತ ದಿನದಲ್ಲಿ ಅತೀ ಹೆಚ್ಚು ದುಶ್ಚಟಕ್ಕೆ ಬಳಿ ಆಗುತ್ತಿರುವುದು ತುಂಬಾ ಆಂತಕಕಾರಿ ಬೆಳವಣಿಗೆ ಈ ಬಗ್ಗೆ ಮಕ್ಕಳು ಜಾಗರುಕರಾಗಿ ಇರಬೇಕು. ಮೊಬೈಲ್ ಬಳಕೆಯ ದುಷ್ಪರಿಣಾಮದ ಬಗ್ಗೆ, ಗಾಂಜಾ ಬಳಕೆ ದುಸ್ಪರಿಣಾಮದ ಬಗ್ಗೆ ಸಮಾಜದಲ್ಲಿ ಸಜ್ಜನರ ಸಹವಾಸ, ಒಳ್ಳೆಯ ಸ್ನೇಹಿತರೆ ಸಹವಾಸ ಮಾಡಿ ದುಶ್ಚಟಕ್ಕೆ ಬಳಿ ಆಗದಂತೆ ತಿಳಿಸಿದರು.
ವೇದಿಕೆಯಲ್ಲಿ ಕೇಪು ವಲಯದ ಮೇಲ್ವಿಚಾರಕರಾದ ಜಗದೀಶ್ ಉಪಸ್ಥಿತರಿದ್ದು ಶುಭ ಹಾರೈಯಿಸಿದರು. ಅಧ್ಯಕ್ಷತೆಯನ್ನು ಪಂಚಾಯತ್ ಅಧ್ಯಕ್ಷರಾದ ಶ್ರೀಧರ್ ಬಾಳೆಕಲ್ಲು ವಹಿಸಿದ್ದರು. ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಲತಾ.ಯು ಸ್ವಾಗತಿಸಿದರು.
ಶಿಕ್ಷಕರಾದ ಸುಧೀಶ್ ಕಾರ್ಯಕ್ರಮ ನಿರೂಪಿಸಿದರು. ಸೇವಾಪ್ರತಿನಿಧಿ ಗುಲಾಬಿ ಸಹಕರಿಸಿದರು.


0 Comments