ಪೆರ್ಲ: ಬೆದ್ರಂಪಳ್ಳದ ದೇಶಾಭಿಮಾನಿ ಸಾರ್ವಜನಿಕ ಗ್ರಂಥಾಲಯದ ವತಿಯಿಂದ ಗಾಂಧೀ ಜಯಂತಿಯ ಅಂಗವಾಗಿ ಸ್ವಚ್ಛತಾ ಕಾರ್ಯಕ್ರಮ ನಡೆಸಲಾಯಿತು. ಇದರಂಗವಾಗಿ ನಡೆದ ಸಭೆಯನ್ನು ಬೆದ್ರಂಪಳ್ಳ ಎಎಲ್ ಪಿ ಶಾಲಾ ಮುಖ್ಯೋಪಾಧ್ಯಾಯ ಮಹೇಶ್ ಕುಮಾರ್ ಉದ್ಘಾಟಿಸಿದರು. ಗ್ರಂಥಾಲಯದ ಅಧ್ಯಕ್ಷ ಸತೀಶ್ ಅಲಾರ್ ಸಭೆಯ ಅಧ್ಯಕ್ಷತೆವಹಿಸಿದ್ದರು. ಅಂಗನವಾಡಿ ಅಧ್ಯಾಪಕಿ ಚೇತನಾ ಟೀಚರ್, ಗ್ರಂಥಾಲಯ ಪದಾಧಿಕಾರಿಗಳು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಮಕ್ಕಳಿಗೆ ರಸಪ್ರಶ್ನೆ ಮತ್ತು ಕೌಶಲ್ಯ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.
ಗ್ರಂಥಾಲಯ ಹಾಗೂ ಶಾಲಾ ಪರಿಸರವನ್ನು ಶುಚಿಗೊಳಿಸಲಾಯಿತು. ಗ್ರಂಥಾಲಯ ಪಾಲಕಿ ಚಿತ್ರಕಲ ಸ್ವಾಗತಿಸಿ ಸುನೀತಾ ವಂದಿಸಿದರು.
0 Comments