ಪೆರ್ಲ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಮಂಜೇಶ್ವರ ತಾಲೂಕು ಹಾಗೂ ಜನ ಜಾಗೃತಿ ವೇದಿಕೆಯ ಆಶ್ರಯದಲ್ಲಿ ದುಶ್ಚಟ ಮುಕ್ತ ಸಮಾಜ ನಿರ್ಮಾಣ ದತ್ತ ಯುವ ಪೀಳಿಗೆಯಲ್ಲಿ ಜಾಗೃತಿ ಮೂಡಿಸಲು ವಿದ್ಯಾರ್ಥಿ ಮಟ್ಟದ ಸ್ವಾಸ್ಥ್ಯ ಸಂಕಲ್ಪ ಮಾಹಿತಿ ಕಾರ್ಯಕ್ರಮ ಪೆರ್ಲ ಶಾಲೆಯಲ್ಲಿ ಜರಗಿತು.ಶಾಲಾ ಮುಖ್ಯೋಪಾಧ್ಯಾಯ ವೇಣುಗೋಪಾಲ ಉದ್ಘಾಟಿಸಿದರು. ಬದಿಯಡ್ಕ ವಲಯ ಅಬಕಾರಿ ಇಲಾಖೆಯ ಜನಾರ್ಧನ ಸಂಪನ್ಮೂಲ ವ್ಯಕ್ತಿಯಾಗಿ ತರಗತಿ ನಡೆಸಿದರು. ಜನ ಜಾಗೃತಿ ವಲಯಾಧ್ಯಕ್ಷ ಬಿ.ಪಿ.ಶೇಣಿ, ಸೇವಾ ಪ್ರತಿನಿಧಿಗಳಾದ ರೇಖಾ ಜ್ಯೋತಿ,ಆಶ್ವಿನಿ ವಾಣಿನಗರ್ ಉಪಸ್ಥಿತರಿದ್ದರು. ಕೃಷ್ಣ ಕುಮಾರ್ ಸ್ವಾಗತಿಸಿ ವಲಯ ಮೇಲ್ವಿಚಾರಕಿ ಜಯಶ್ರೀ ವಂದಿಸಿದರು. ಡಾ.ಸತೀಶ್ ಪುಣಿಂಚಿತ್ತಾಯ ನಿರೂಪಿಸಿದರು.
0 Comments