ಪೊಳ್ಳು ಭಾಷಣ ಬಿಗಿದ ಮಾಜಿ ಪಂ.ಅಧ್ಯಕ್ಷೆರಿಗೆ ಸಭೆಯಲ್ಲಿಯೇ ಸ್ಪಷ್ಟನೆ ನೀಡಿದ ಹಾಲಿ ಅಧ್ಯಕ್ಷರ ದಿಟ್ಟ ಉತ್ತರ !!!


ಪೆರ್ಲ : ಸುಳ್ಳು ಪೊಳ್ಳಿನ ಭಾಷಣ ಬಿಗಿಯುವ ಕೆಟ್ಟ ಚಾಳಿಯ ರಾಜಕಾರಣಿಗಳನ್ನು ನಾವು ಎಷ್ಟೊ ಕಂಡಿರಬಹುದು. ಆದರೆ ಇಂತಹ ಪೊಳ್ಳು ಭಾಷಣವನ್ನು ಖಂಡಿಸಿ ಅದೇ ಸಭೆಯಲ್ಲಿ ಸಾಕ್ಷ್ಯಾಧಾರಗಳ ವಿವರಣೆ ಸಮೇತ ಸ್ಷಷ್ಟನೆಯ ದಿಟ್ಟ ಉತ್ತರ ನೀಡಿದ ಪ್ರಸಂಗವೊಂದಕ್ಕೆ ಎಣ್ಮಕಜೆ ಗ್ರಾಮ ಪಂಚಾಯತಿನ ಕುಟುಂಬ ಆರೋಗ್ಯ ಕೇಂದ್ರದಲ್ಲಿ ನಡೆದ ಕಾರ್ಯಕ್ರಮವೊಂದು ಸಾಕ್ಷಿಯಾಗಿದೆ. 

ಆಡಳಿತರೂಢ ಪಂಚಾಯತ್ ಅಭಿವೃದ್ಧಿಯನ್ನು  ಅವಗಣಿಸುವ ಹೇಳಿಕೆಗಳನ್ನು ಪದೇ ಪದೇ ನೀಡುತ್ತಾ ಬರುತ್ತಿರುವ ಮಾಜಿ ಪಂ.ಅಧ್ಯಕ್ಷೆಯೊರ್ವರು ಬುಧವಾರದಂದು ಮಧ್ಯಾಹ್ನ ಬಳಿಕ  ಪೆರ್ಲದ ಕುಟುಂಬ ಆರೋಗ್ಯ ಕೇಂದ್ರದ ಕಿಟ್ ವಿತರಣಾ ಕಾರ್ಯಕ್ರಮದ ಸಭೆಯೊಂದರಲ್ಲಿ ಭಾಗವಹಿಸಿ ಕೈಗೆ ಮೈಕ್ ಸಿಕ್ಕಿದ ಸಂದರ್ಭ ಆರೋಗ್ಯ ಕೇಂದ್ರದ ನೂತನ ಕಟ್ಟಡ ನಿರ್ಮಾಣ ಸಹಿತ ಹಲವಾರು ಅಭಿವೃದ್ಧಿ ಕಾರ್ಯಗಳು ತನ್ನ ಆಡಳಿತ ಅವಧಿಯಲ್ಲಿ ನಡೆದಿರುವುದೆಂದು ಬೊಗಳೆ ಭಾಷಣ ಬೀಗಿಯುವ ವೇಳೆ ಸಭೆಯಲ್ಲಿಯೇ ಇದ್ದ ಪ್ರಸ್ತುತ ಪಂಚಾಯತು ಅಧ್ಯಕ್ಷರಾದ ಸೋಮಶೇಖರ್ ಜೆ.ಎಸ್. ಈ ಹೇಳಿಕೆಯನ್ನು ಖಂಡಿಸಿ ಬಳಿಕ ಈ ಬೃಹತ್ ಕಟ್ಟಡ ನಿರ್ಮಾಣದ ಯೋಜನೆ, ರೂಪುರೇಷೆ ಮತ್ತು ಉದ್ಘಾಟನೆಯ ಸಂದರ್ಭದ ಸಾಕ್ಷ್ಯಾಧಾರದ ಸಹಿತ ಸ್ಪಷ್ಟನೆ ನೀಡಿ ವಿವರಿಸಿದ್ದು


ಸಭೆಯಲ್ಲಿ ಸುಳ್ಳಿನ ಭಾಷಣ ಹರಿಯ ಬಿಟ್ಟ ಮಾಜಿ ಅಧ್ಯಕ್ಷೆ  ಸಭೆ ಮುಗಿಯುವುದಕ್ಕಿಂತ ಮುಂಚೆ ಸ್ಥಳದಿಂದ ಕಾಲ್ಕಿತ್ತ ಹಾಸ್ಯಸ್ಪದ ಪ್ರಸಂಗವೊಂದಕ್ಕೆ ನೆರೆದ ಜನತೆ ಸಾಕ್ಷಿಯಾಗಿದ್ದಾರೆ.

ಪ್ರಸ್ತುತ ಪಂಚಾಯತ್ ಆಡಳಿತದ ಅಭಿವೃದ್ಧಿ ಕಾರ್ಯಗಳನ್ನು ವಾಮಾಗೋಚರವಾಗಿ ಟೀಕಿಸುತ್ತಾ  ತನ್ನ ರಾಜಕೀಯ ವರ್ಚಸ್ಸನ್ನು ಹೆಚ್ಚಿಸಿಕೊಳ್ಳಲು ಪ್ರಯತ್ನಿಸುವ ಮಾಜಿ ಪಂ.ಅಧ್ಯಕ್ಷೆಯ ಸಮಯ ಸಾಧಕತನದ ಸುಳ್ಳಿನ‌ ಕಂತೆ ಪುರಾಣ ಇದೀಗ ನೆರೆದ ಸಭೆ ಎದುರೇ ಬಹಿರಂಗಗೊಂಡಿರುವುದು ಜನತೆ ನೆಗಾಡಿಕೊಳ್ಳುವಂತಾಗಿದೆ.

ಪ್ರಸ್ತುತ ಕುಟುಂಬ ಆರೋಗ್ಯ ಕೇಂದ್ರದ ಕಟ್ಟಡವನ್ನು 2010ರಿಂದ 2015ರ ವರೆಗೆ  ಸೋಮಶೇಖರ್ ಜೆ.ಎಸ್. ಅಧ್ಯಕ್ಷರಾಗಿದ್ದ ಆಡಳಿತಾವಧಿಯಲ್ಲಿ ಎಂಡೋಸಲ್ಫನ್ ವಿಶೇಷ ಪ್ಯಾಕೇಜ್ ಗೊಳಪಡಿಸಿ ನಿರ್ಮಿಸಲು ಯೋಜನೆಗಳನ್ನು ರೂಫೀಕರಿಸಲಾಗಿತ್ತು. ಇದಕ್ಕೆ ಅಂದಿನ ಪಂ.ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷರಾಗಿದ್ದ ಬಿ.ಎಸ್.ಗಾಂಭೀರ್ ಹಾಗೂ ಹೆಲ್ತ್ ಇನ್ಸ್ ಪೆಕ್ಟರ್ ಆಗಿದ್ದ ತಿರುಮಲೇಶ್ ವಿಶೇಷ ಮುತುವರ್ಜಿವಹಿಸಿ ಅಗತ್ಯ ಕಾರ್ಯಗಳಲ್ಲಿ ಮುಂದುವರಿದಿದ್ದರು. ಪರಿಣಾಮ ಕಟ್ಟಡ ಕಾಮಗಾರಿ ನಡೆದಿದ್ದು ಈ ಬಾರಿಯ ಪಂಚಾಯತ್ ಆಡಳಿತ ಅವಧಿಯಲ್ಲಿ ಕೊರೋನದ ಬಳಿಕ ಕಟ್ಟಡದ ಉದ್ಘಾಟನೆ ನಡೆಸಲಾಗುತ್ತು.

Post a Comment

0 Comments