ಎಣ್ಮಕಜೆ ಪಂ.ಅಧ್ಯಕ್ಷರಿಂದ ಮಾಜಿ ಪಂ.ಅಧ್ಯಕ್ಷೆಗೆ ಬಹಿರಂಗ ಸವಾಲು


 ಪೆರ್ಲ : ಎಣ್ಮಕಜೆ ಗ್ರಾ.ಪಂ.ನ ಮಾಜಿ ಅಧ್ಯಕ್ಷೆಯೋರ್ವರು ಮುಂದಿನ ಪಂಚಾಯತು ಚುನಾವಣೆಗೆ ರಾಜಕೀಯದ ಲಾಭ ಸದುಪಯೋಗಪಡಿಸಿಕೊಳ್ಳುವ ನೆಪದಲ್ಲಿ ಪ್ರಸ್ತುತ ಪಂಚಾಯತ್ ಆಡಳಿತದ ವಿರುದ್ಧ ಅಭಿವೃದ್ಧಿ ವಿಚಾರದಲ್ಲಿ ಪ್ರತಿಯೊಂದೆಡೆಯೂ ತಗಾದೆ ತೆಗೆಯುವ ಕೀಳು ಮಟ್ಟದ ಧೋರಣೆಗಿಳಿದಿದ್ದು ಇದೀಗ ಪಂಚಾಯತು ಅಧ್ಯಕ್ಷರೇ ಸ್ವತಃ ಮುಂದೆ ಬಂದು ಬಹಿರಂಗ ಚರ್ಚೆಗೆ ಮಾಜಿ ಅಧ್ಯಕ್ಷೆಯನ್ನು ಆಹ್ವಾನಿಸಿರುವುದು ಸುದ್ದಿಯಾಗಿದೆ.

ಈ ಬಗ್ಗೆ ತಮ್ಮ ಅಭಿಪ್ರಾಯವನ್ನು ಪೆಸ್ಬುಕ್ ಪೇಜ್ ಪೋಸ್ಟ್ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ.
"ಎಣ್ಮಕಜೆ ಪಂಚಾಯತ್ ಮಾಜಿ ಅಧ್ಯಕ್ಷೆ,ಅಪಪ್ರಚಾರದ ವಕ್ತಾರೆ ವಾಸ್ತವ ವಿರುದ್ಧ ವಾದವನ್ನು ಇಟ್ಟುಕೊಂಡು ಬೊಗಳೆ ಬಿಡುವುದು ಇವರ ಚಾಳಿ ಅಭಿವೃದ್ಧಿ ವಿಚಾರದಲ್ಲಿ ಯುಡಿಎಫ್ ಸಾಧನೆ ಜನರಿಗೆ ತಿಳಿದಿದೆ.ಮಾಜಿ ಅಧ್ಯಕ್ಷೆ ರೂಪವಾಣಿ ಅತ್ಯಂತ ಕೀಳು ಮಟ್ಟದ ರಾಜಕೀಯಕ್ಕೆ ಕೈ ಹಾಕಿದ್ದಾರೆ. ಸಮಯ ಸ್ಥಳ ನಿಗದಿ ಮಾಡಿ ನಿಮ್ಮ ಆರೋಪಗಳ ಬಹಿರಂಗ ಚರ್ಚೆಗೆ ಸಿದ್ಧನಿದ್ದೇನೆ" ಎಂದು ಎಣ್ಮಕಜೆ ಪಂಚಾಯತು ಅಧ್ಯಕ್ಷ ಸೋಮಶೇಖರ್ ಜೆ.ಎಸ್. ತಮ್ಮ ಪೆಸ್ಬುಕ್ ಪೋಸ್ಟ್ ನಲ್ಲಿ ಉಲ್ಲೇಖಿಸಿದ್ದಾರೆ.
ಕನ್ನಡ ಹಾಗೂ ಮಲೆಯಾಳದಲ್ಲಿ ಬರೆದ ಈ ಪೋಸ್ಟು ಇದೀಗ ಎಲ್ಲೆಡೆ ವೈರಲ್ ಆಗಿದೆ.‌



ಬಹಿರಂಗ ಚರ್ಚೆಗೆ ಮಾಜಿ ಪಂ.ಅಧ್ಯಕ್ಷೆ ಎಲ್ಲಿ ಯಾವಗ ಸಮಯ ಸ್ಥಳ ನಿಗದಿ ಮಾಡುತ್ತಾರೆಯೇ ಅಥವ ಹಿಂಜರಿಯುತ್ತಾರೆಯೇ ಎಂಬುದು ಇದೀಗ ಎಣ್ಮಕಜೆ  ರಾಜಕೀಯ ವಲಯದಲ್ಲಿ ಕುತೂಹಲಕಾರಿ ವಿಷಯವಾಗಿದೆ.

Post a Comment

0 Comments