ಕಾಸರಗೋಡು : ಶ್ರೀ ವೆಂಕಟ್ರಮಣ ಸ್ವಾಮಿ ಕೃಪಾಶ್ರಿತ ಯಕ್ಷಗಾನ ಅಧ್ಯಯನ ಕೇಂದ್ರದ ಸಪ್ತಮ ವಾರ್ಷಿಕೋತ್ಸವವು ಪೇಟೆ ಶ್ರೀ ವೆಂಕಟರಮಣ ಕ್ಷೇತ್ರದ ವ್ಯಾಸ ಮಂಟಪದಲ್ಲಿ ಜರಗಿತು. ಶ್ರೀ ವೆಂಕಟ್ರಮಣ ಬಾಲಗೋಕುಲದ ಮಕ್ಕಳ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮವನ್ನು ಕ್ಷೇತ್ರ ತಂತ್ರಿವರ್ಯ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಅಸ್ರ ದೀಪ ಪ್ರಜ್ವಲಿಸಿ ಚಾಲನೆ ನೀಡಿದರು. ಅಧ್ಯಕ್ಷ ಸ್ಥಾನವನ್ನು ಡಾ| ಜನಾರ್ಧನ ನಾಯ್ಕ್ ಅಲಂಕರಿಸಿದರು ವೇದಿಕೆಯಲ್ಲಿ ಅಧ್ಯಯನ ಕೇಂದ್ರದ ನಾಟ್ಯಗುರು ಶ್ರೀ ರಾಕೇಶ್ ರೈ ಅದ್ಕ, ಶ್ರೀ ಕೃಷ್ಣ ಮನ್ನಿಪ್ಪಾಡಿ, ಶ್ರೀ ಲವ ಮೀಪುಗುರಿ, ಡಾ| ಕೆ.ಎನ್. ವೆಂಕಟ್ರಮಣ ಹೊಳ್ಳ ಉಪಸ್ಥಿತರಿದ್ದರು. ಅಧ್ಯಯನ ಕೇಂದ್ರದ ಅಧ್ಯಕ್ಷ ಶ್ರೀ ಕೆ.ಎನ್. ರಾಮಕೃಷ್ಣ ಹೊಳ್ಳ ಸ್ವಾಗತಿಸಿ ಶ್ರೀ ಕಿಶೋರ್ ಕುಮಾರ್ ವಂದಿಸಿ ಶ್ರೀ ಜಗದೀಶ್ ಕೂಡ್ಲು ಕಾರ್ಯಕ್ರಮ ನಿರೂಪಿಸಿದರು ನಂತರ ಅಧ್ಯಯನ ಕೇಂದ್ರದ ವಿದ್ಯಾರ್ಥಿಗಳಿಂದ “ಹರೇ ರಾಮ ಹರೇ ಕೃಷ್ಣ” ಯಕ್ಷಗಾನ ಬಯಲಾಟ ಜರಗಿತು.


0 Comments