ಕಾಸರಗೋಡು : ಪಾಂಗೋಡು ಶ್ರೀ ದುರ್ಗಾಪರಮೇಶ್ವರೀ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ನವರಾತ್ರಿ ಉತ್ಸವ ಹಾಗೂ ಕನ್ನಡ ಭವನದ ನೇತೃತ್ವದಲ್ಲಿ ನಡೆಯುವ ಕಾಸರಗೋಡು ದಸರಾ ಸಾಂಸ್ಕೃತಿಕೋತ್ಸವಕ್ಕೆ ಗುರುವಾರ ಚಾಲನೆ ನೀಡಲಾಯಿತು. ಹಾರ್ನಾಡು ಪದ್ಮನಾಭ ತಂತ್ರಿಗಳ ಮಾರ್ಗದರ್ಶನದಲ್ಲಿ ಶ್ರೀಕ್ಷೇತ್ರದ ಪಾತ್ರಿಗಳಾದ ಪಾಂಗೋಡು ಪ್ರವೀಣ ನಾಯಕ್ ದೀಪ ಪ್ರಜ್ವಲನೆ ಮಾಡಿದರು.
ಕಾಸರಗೋಡಿನ ಮಲ್ಲಿಕಾರ್ಜುನ ಕ್ಷೇತ್ರದ ಆಡಳಿತ ಸಮಿತಿಯ ಸದಸ್ಯ ಡಾ. ಕೆ ಎನ್ ವೆಂಕಟ್ರಮಣ ಹೊಳ್ಳ ಅಧ್ಯಕ್ಷತೆ ವಹಿಸಿದರು.
ದಸರಾ ಸಾಂಸ್ಕೃತಿಕೋತ್ಸವವನ್ನು ಕರ್ನಾಟಕ ವಿಧಾನ ಪರಿಷತ್ತಿನ ಮಾಜಿ ಮುಖ್ಯ ಸಚೇತಕ ಕ್ಯಾ ಗಣೇಶ ಕಾರ್ಣಿಕ್ ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಕಸಾಪ ಕೇರಳ ಗಡಿನಾಡ ಘಟಕದ ಅಧ್ಯಕ್ಷ ಡಾ. ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ, ಧಾರ್ಮಿಕ ಮುಖಂಡರಾದ ಅರಿಬೈಲ್ ಗೋಪಾಲ ಶೆಟ್ಟಿ, ಶ್ರೀಧರ ಶೆಟ್ಟಿ ಮುಟ್ಟಂ, ಶಿಕ್ಷಣ ತಜ್ಞ ವಿಶಾಲಾಕ್ಷ ಪುತ್ರಕಳ, ಪತ್ರಕರ್ತರಾದ ಪ್ರದೀಪ್ ಬೇಕಲ್, ಗಂಗಾಧರ ತೆಕ್ಕೇಮೂಲೆ, ಪಿ.ಕೆ ಜಗನ್ನಾಥ ಶೆಟ್ಟಿ, ಜಯ ಮಣಿಯಂಪಾರೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ನಂತರ ಸಂಕೀರ್ತನಾ ಸಾಮ್ರಾಟ ಜಯಾನಂದ ಕುಮಾರ್ ಹೊಸದುರ್ಗ ಅವರ ಸಾರಥ್ಯದಲ್ಲಿ 11ನೇ ವರ್ಷದ ದಸರಾ ಸಂಕೀರ್ತನಾ ದಶಾಹ ಉದ್ಘಾಟನೆಗೊಂಡಿತು.
ಧಾರ್ಮಿಕ ಮುಂದಾಳು ಸವಿತಾ ಟೀಚರ್ ಶುಭಾಶಂಸನೆಗೈದರು. ಕಾಸರಗೋಡಿನ ನುಳ್ಳಿಪ್ಪಾಡಿಯ ಕನ್ನಡ ಭವನ ಗ್ರಂಥಾಲಯ ಸ್ಥಾಪಕ ಅಧ್ಯಕ್ಷ ವಾಮನ್ ರಾವ್ ಬೇಕಲ್ ಸ್ವಾಗತಿಸಿ ವಸಂತ ಕೆರೆಮನೆ ವಂದಿಸಿದರು. ಜಗದೀಶ್ ಕೂಡ್ಲು ನಿರೂಪಿಸಿದರು.






0 Comments