ಕುಂಬ್ಡಾಜೆ : ಗ್ರಾಮ ಸೇವಾ ಗ್ರಂಥಾಲಯ ಏತಡ್ಕ ಇದರ ವತಿಯಿಂದ ಗಾಂಧಿ ಜಯಂತಿ ಆಚರಣೆಯನ್ನು ಗ್ರಂಥಾಲಯದ ಪರಿಸರವನ್ನು ಸ್ವಚ್ಛ ಮಾಡುವುದರ ಮೂಲಕ ಆಚರಿಸಲಾಯಿತು ಕಾರ್ಯಕ್ರಮದ ನೇತೃತ್ವವನ್ನು ಗ್ರಂಥಾಲಯದ ಅಧ್ಯಕ್ಷ ವೈ ಕೆ ಗಣಪತಿ ಭಟ್ ಏತಡ್ಕ ಇವರು ವಹಿಸಿದ್ದರು. ಗ್ರಂಥಾಲಯದ ಕಾರ್ಯದರ್ಶಿ ಗಣರಾಜ ಕೆ ಏತಡ್ಕ ಹಾಗೂ ವಯೋಜನ ವೇದಿಕೆಯ ಕಾರ್ಯದರ್ಶಿ ನರಸಿಂಹ ಭಟ್ ಕಟ್ಟದ ಮೂಲೆ ಹಾಗೂ ಜೊತೆ ಕಾರ್ಯದರ್ಶಿ ಚಂದ್ರಶೇಖರ ಏತಡ್ಕ, ಗ್ರಂಥಪಾಲಕಿ ಶ್ರೀಮತಿ ಶಾಂತಕುಮಾರಿ ಮತ್ತಿತರ ಹಲವಾರು ಸದಸ್ಯರ ಸಹಕಾರದೊಂದಿಗೆ ಕಾರ್ಯಕ್ರಮ ಯಶಸ್ವಿಯಾಗಿ ಸಂಪನ್ನಗೊಂಡಿತು.


0 Comments