ಕಾಸರಗೋಡು ಬಿ ಇ ಎಂ ಶಾಲಾ ಕಲೋತ್ಸವ ರಂಗ ನಟ ನಿರ್ದೇಶಕ ಶಶಿಧರ್ ಎದ್ರುತ್ತೋಡು ಉದ್ಘಾಟನೆ


ಕಾಸರಗೋಡು : ನಗರದ ಬಿ.ಇ.ಎಂ ಶಾಲೆಯಲ್ಲಿ 2024 -25 ನೇ ಶೈಕ್ಷಣಿಕ ವರ್ಷದ ಶಾಲಾ ಕಲೋತ್ಸವವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಪ್ರಾಂಶುಪಾಲರಾದ ಶ್ರೀಯುತ ರಾಜೇಶ್ ಚಂದ್ರ ಅವರು ವಹಿಸಿದರು. ಕಾರ್ಯಕ್ರಮದ ಮುಖ್ಯ ಅತಿಥಿ ಶ್ರೀಯುತ ಶಶಿಧರ್ ಎದ್ರುತೋಡು ಅವರು ದೀಪ ಬೆಳಗಿಸಿ ಉದ್ಘಾಟಿಸಿ, ಕಲೆಗಳಲ್ಲಿ ನಾಟಕ ಕಲೆಯ ಕುರಿತು ವಿದ್ಯಾರ್ಥಿಗಳಿಗೆ ಸ್ಪೂರ್ತಿ ನೀಡುವಂತಹ ಮಾತುಗಳನ್ನಾಡಿದರು. ನಾಟಕಕಾರ ಹಾಗೂ ನಾಟಕ ತರಬೇತಿ ನೀಡುವಂತಹ ಮುಖ್ಯ ಅತಿಥಿಯಾದ ಶ್ರೀಯುತ ಶಶಿಧರ್ ಎದ್ರುತೋಡು  ಅವರ  ಸಾಧನೆಗಳನ್ನು  ಮನಗಂಡು  ಶಾಲೆಯ ಪರವಾಗಿ ಸನ್ಮಾನಿಸಲಾಯಿತು.ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಶ್ರೀಯುತ ಪ್ರೇಮ್ ಜಿತ್ ಹಾಗೂ ಮಾತೃ ಸಮಿತಿಯ ಅಧ್ಯಕ್ಷೆ ಶ್ರೀಮತಿ ಉಷಾ ಕಿರಣ್, ಸಾರ್ವಜನಿಕ ಶಿಕ್ಷಣ ಸಂರಕ್ಷಣಾ ಯಜ್ಞದ ಅಧ್ಯಕ್ಷ  ಶ್ರೀಯುತ  ಡಾ ಕೆ ಎನ್ ವೆಂಕಟರಮಣ ಹೊಳ್ಳ, ಶಾಲಾ ಪ್ರಾಂಶುಪಾಲರಾದ ಶ್ರೀಯುತ ರಾಜೇಶ್ ಚಂದ್ರ,ಸ್ಟಾಫ್ ಸೆಕ್ರೆಟರಿ ಶ್ರೀಯುತ ಯಶವಂತ ವೈ, ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ,ಶುಭ ಹಾರೈಸಿದರು. ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀಯುತ ಗಣೇಶ  ಕಾರ್ಯಕ್ರಮದಲ್ಲಿ ಎಲ್ಲರನ್ನೂ ಸ್ವಾಗತಿಸಿದರು.ಅಧ್ಯಾಪಿಕೆಯಾದ ಶ್ರೀಮತಿ ಶರ್ಲಿ ಕಾರ್ಯಕ್ರಮವನ್ನು ನಿರೂಪಿಸಿದರು. ಶಾಲಾ ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಪ್ರಾರಂಭಗೊಂಡ ಕಾರ್ಯಕ್ರಮ ಶಾಲಾ ಕಲೋತ್ಸವದ ಸಂಚಾಲಕಿ ಶ್ರೀಮತಿ ರೋಹಿತಾಕ್ಷಿ  ಅವರ ಧನ್ಯವಾದದೊಂದಿಗೆ ಕೊನೆಗೊಂಡಿತು.

Post a Comment

0 Comments