ವಿಟ್ಲದಲ್ಲಿ ಹಿಂದು ಜಟ್ಕಾ ಕೋಳಿ ಅಂಗಡಿ ತೆರವು ಏಕಮುಖ ಕ್ರಮಕ್ಕೆ ಭಾರೀ ವಿರೋಧ


 ವಿಟ್ಲ : ಸಮೀಪದ ಮಂಗಳ ಪದವು ನಿವಾಸಿ ಧನಂಜಯ್ ಪಾದೆ  ಅವರಿಗೆ ಸೇರಿರುವ ಜಾಗದಲ್ಲಿ ನಡೆಯುತ್ತಿರುವ , ಹಿಂದು   ಜಟ್ಕಾ ಕೋಳಿ ಮಾಂಸ ಅಂಗಡಿಯನ್ನು ಏಳು ದಿನದೊಳಗೆ ತೆರವು ಮಾಡಲು  ವೀರಕಂಬ ಪಂಚಾಯತ್ ಅಧಿಕಾರಿಗಳು ನೋಟಿಸ್ ಜಾರಿ ಮಾಡಿರುವ ವಿರುದ್ಧ ಇದು ಏಕಾಮುಖ ರಾಜಕೀಯ ಎಂದು ಕೆಲವು  ಹಿಂದೂ ಮುಖಂಡರು  ಆರೋಪಿಸಿ ರಂಗಕ್ಕಿಳಿದಿದ್ದು  ಯುವ ಹಿಂದೂ ನೇತಾರ ಅಕ್ಷಯ್ ರಜಪೂತ್ ಈ ಪ್ರಕರಣವನ್ನು ತೀವ್ರವಾಗಿ‌ ಖಂಡಿಸಿದ್ದಾರೆ.  ಇದೇ ಪಂಚಾಯತ್ ವ್ಯಾಪ್ತಿಯಲ್ಲಿ ಅದೆಷ್ಟೋ ಅನಧಿಕೃತ ಕಟ್ಟಡ ಸರ್ಕಾರಿ / ಖಾಸಗಿ ಜಾಗದಲ್ಲಿ ನಡೆಯುತ್ತಿದ್ದು , ಅವರಿಗೆ ಯಾರಿಗೂ  ತೆರವು ಮಾಡಲು ನೋಟಿಸ್ ನೀಡದೆ  ಕೇವಲ ಹಿಂದೂ ಜಡ್ಕಾ  ಕೋಳಿ ಮಾಂಸ ಅಂಗಡಿಗೆ ನೋಟಿಸ್ ನೀಡಿರುವುದು ಯಾವುದೋ ಹುನ್ನಾರದ ಭಾಗವೆಂದು ಶಂಕೆ ಉಂಟು ಮಾಡಿದೆ. ಇಲ್ಲಿನ ಎಲ್ಲಾ ಅನಧಿಕೃತ ಕಟ್ಟಡವನ್ನು ತೆರವು ಮಾಡದೆ ಟಾರ್ಗೆಟ್ ಮಾಡುವ ಮೂಲಕ ಕೇವಲ ಹಿಂದೂ ಜಟ್ಕಾ ಕೋಳಿ ಮಾಂಸ ಅಂಗಡಿಯನ್ನು ತೆರವು ಮಾಡಿದರೆ, ಸಂಪೂರ್ಣ  ಹಿಂದೂ ಸಮಾಜ ಬೃಹತ್ ವೀರಕಂಬ ಪಂಚಾಯತ್ ಚಲೊ ಹೋರಾಟಕ್ಕಿಳಿಯಲು ಸಿದ್ಧತೆ ನಡೆಸುವುದಾಗಿ ಅವರು ತಿಳಿಸಿದ್ದಾರೆ. ಹಿಂದೂಗಳ ಕಣ್ಣಿಗೆ ಸುಣ್ಣ ಉಳಿದವರಿಗೆ ಬೆಣ್ಣೆ ಹಚ್ಚುವ ಸಂಪ್ರದಾಯ ಕೈಬಿಡಬೇಕು ಎಂದು ಅವರು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

Post a Comment

0 Comments