ಉದ್ಯೋಗ ಭರವಸೆ - ಹಣ ವಂಚನೆಯ ಡಿವೈಎಫ್ಐ ನೇತಾರೆಯ ರಹಸ್ಯ ಬಯಲಿಗೆಳೆಯುವಂತೆ ಯುವ ಕಾಂಗ್ರೆಸ್ ಆಗ್ರಹ


ಪೆರ್ಲ : ಉದ್ಯೋಗ ಕೊಡಿಸುವುದಾಗಿ ನಂಬಿಸಿ ಹಣ ವಂಚಿಸಿದ ಡಿವೈಎಫ್ಐ ನಾಯಕಿಯವಿರುದ್ಧ ಸಮಗ್ರ ತನಿಖೆ ನಡೆಸಬೇಕು ಎಂದು ಯುವ ಕಾಂಗ್ರೆಸ್ ಎಣ್ಮಕಜೆ ಮಂಡಲ ಸಮಿತಿ ಆಗ್ರಹಿಸಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ದುರಾಡಳಿತದಿಂದ ನಿರುದ್ಯೋಗಿಯಾಗಿರುವ ಹತಾಶ ಯುವಕ ಯುವತಿಯ ಪೈಕಿ ಯುವತಿಯೊಬ್ಬಳಿಗೆ ಸುಳ್ಳು ಭರವಸೆಗಳನ್ನು ನೀಡಿ ಹಣ ವಂಚಿಸಿರುವುದು ಆಘಾತಕಾರಿಯಾಗಿದೆ. ಡಿವೈಎಫ್ಐ ಮುಖಂಡೆಯಾದ ಶಿಕ್ಷಕಿಯೊಬ್ಬಳು ಉದ್ಯೋಗ ಕೊಡಿಸುವುದಾಗಿ ನಂಬಿಸಿ ಯುವತಿಗೆ ವಂಚಿಸಿದ್ದಾರೆ ಎಂಬ ದೂರಿನ ಬಗ್ಗೆ ಸಮಗ್ರ ತನಿಖೆ ನಡೆಸಬೇಕೆಂದು ಈ ಹಿಂದೆ ಇರುವ ಕಾಣದ ಕೈಗಳ ರಹಸ್ಯವನ್ನು ಬಯಲಿಗೆಳೆಯಬೇಕೆಂದು ಯುವ ಕಾಂಗ್ರೆಸ್ ಎಣ್ಮಕಜೆ ಮಂಡಲ ಸಮಿತಿ ಒತ್ತಾಯಿಸಿದೆ.

Post a Comment

0 Comments