ಉದ್ಯೋಗದ ಭರವಸೆ ನೀಡಿ ಶಿಕ್ಷಕಿ ಹಣ ವಂಚಿಸಿದ ಪ್ರಕರಣದಲ್ಲಿ ಸಿಪಿಎಂ-ಬಿಜೆಪಿ ಉನ್ನತ ನಾಯಕರು ಭಾಗಿಯಾಗಿದ್ದಾರೆ - ಯೂತ್ ಕಾಂಗ್ರೆಸ್ ಆರೋಪ

 


ಪೆರ್ಲ: ಕೇಂದ್ರ ಸರಕಾರಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಶಿಕ್ಷಕಿ ಹಾಗೂ ಡಿವೈಎಫ್ಐ ನಾಯಕಿ ಸಚಿತಾ ರೈ ಹಣ ವಂಚಿಸಿದ ಘಟನೆಯಲ್ಲಿ ಭಾಗಿಯಾಗಿರುವ ಸಿಪಿಎಂ-ಬಿಜೆಪಿ ಉನ್ನತ ನೇತಾರರನ್ನು ಬೆಳಕಿಗೆ ತರಬೇಕು ಮತ್ತು ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಬೇಕು ಎಂದು ಆಗ್ರಹಿಸಿ ಎಣ್ಮಕಜೆ ಯುವ ಕಾಂಗ್ರೆಸ್ ವತಿಯಿಂದ ಪೆರ್ಲ ಪೇಟೆಯಲ್ಲಿ ಬುಧವಾರ ಸಂಜೆ ಪ್ರತಿಭಟನೆ ನಡೆಯಿತು.

ಶಿಕ್ಷಕಿಯಾಗಿ ಮುಂದುವರಿಯಲು ಅರ್ಹರಲ್ಲ ಎಂದು ಕೃತ್ಯ ಎಸಗಿದ ಸಚಿತಾ ಅವರನ್ನು ಆಡಳಿತ ಮಂಡಳಿ ತಕ್ಷಣ ವಜಾಗೊಳಿಸಬೇಕು, ಇಲ್ಲದಿದ್ದಲ್ಲಿ ಪ್ರತಿಭಟನಾ ಕಾರ್ಯಕ್ರಮಗಳೊಂದಿಗೆ ಮುಂದುವರಿಯುತ್ತೇವೆ ಮತ್ತು ಕೇವಲ ಮೋಸ ಮಾಡಿದ್ದಾರೆ ಎಂದು ಎಫ್ ಐ ಆರ್ ಬರೆದ ಪೊಲೀಸರ ಕ್ರಮವನ್ನು ಪ್ರತಿಭಟಿಸಿದರು.

ಪ್ರತಿಭಟನೆಯ ಅಧ್ಯಕ್ಷತೆಯನ್ನು ಯುವ ಕಾಂಗ್ರೆಸ್ ಎಣ್ಮಕಜೆ ಮಂಡಲದ ಅಧ್ಯಕ್ಷ ಫಾರೂಕ್ ಪಿ.ಎಂ ವಹಿಸಿದ್ದ ರು.  ಮಂಡಲ ಕಾಂಗ್ರೆಸ್ ಅಧ್ಯಕ್ಷರು ಬಿ ಎಸ್ ಗಾಂಭೀರ ಉದ್ಘಾಟಿಸಿದರು . ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯದರ್ಶಿ ಶ್ರೀನಾಥ್ ಎ, ಜಿಲ್ಲಾ ಯುವ ಕಾಂಗ್ರೆಸ್ ಮಾಜಿ ಕಾರ್ಯದರ್ಶಿ ಹ್ಯಾರಿಸ್ ಎಂ.ಎಚ್, ಕಾಂಗ್ರೆಸ್ ಮಂಡಲ ಸಮಿತಿ ಕಾರ್ಯದರ್ಶಿ ನೌಶಾದ್ ಶೇಣಿ, ಮಂಡಲ ಐವೈಸಿ ಮಾಜಿ ಅಧ್ಯಕ್ಷ ನವೀನ್ ಮಾತನಾಡಿದರು, ಪ್ರತಿಭಟನೆಯಲ್ಲಿ ಜಬ್ಬಾರ್ ನಲ್ಕ ಲತೀಫ್ ಕೆ.ಎಂ  .ಶ್ರೀನಿವಾಸ್, ಆಸಿಫ್, ಶರತ್, ಮಂಜುನಾಥ ಮತ್ತಿತರರು ಭಾಗವಹಿಸಿದ್ದರು.ಐವೈಸಿ ಮಂಡಲ ಪ್ರಧಾನ ಕಾರ್ಯದರ್ಶಿ ಹನೀಫ್ ಕಾಟುಕುಕ್ಕೆ ಸ್ವಾಗತಿಸಿ, ಐವೈಸಿ ಮಂಡಲದ ಮಾಜಿ ಅಧ್ಯಕ್ಷ ಕಿರಣ್ ವಂದಿಸಿದರು

Post a Comment

0 Comments