ಸಾಂಸ್ಕೃತಿಕ ಸಾಮಾಜಿಕ ಮುಂದಾಳು ಯುಎಇ ಉದ್ಯಮಿ ರೊನಾಲ್ಡೊ ಮಾರ್ಟಿಸ್ ದ. ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ


 ಮಂಗಳೂರು : 2024 ನೇ ಸಾಲಿನ ದ. ಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಯುಎಇಯ ಉದ್ಯಮಿ, ಚಿತ್ರ ನಿರ್ಮಾಪಕ ಸಾಮಾಜ ಸೇವಕ ರೊನಾಲ್ಡೊ ಮಾರ್ಟಿಸ್ ಅವರು ಆಯ್ಕೆಯಾಗಿದ್ದಾರೆ. ದ. ಕ ಜಿಲ್ಲಾಧಿಕಾರಿಯವರು ನಿನ್ನೆ ರಾಜ್ಯೋತ್ಸವ ಪ್ರಶಸ್ತಿ ವಿಜೇತರನ್ನು ಘೋಷಿಸಿದ್ದು, ಅನಿವಾಸಿ ಕನ್ನಡಿಗನ ಸಮಾಜ ಸೇವೆಗಾಗಿ  ಈ  ಪ್ರಶಸ್ತಿ ಸಲ್ಲುತ್ತದೆ. 

ಮೂಲತಃ ಬಂಟ್ವಾಳದವರಾದ ಮಾರ್ಟಿಸ್ ದುಬೈಯಲ್ಲಿ  ಉದ್ಯಮಿಯಾಗಿ ಬ್ಲೂ ರೋಯಲ್ ಗ್ರೂಫ್ ಆಫ್ ಕಂಪೆನಿ ಎಂಬ ಪ್ರತಿಷ್ಠಿತ ಉದ್ಯಮ ಸಂಸ್ಥೆಯನ್ನು ಸ್ಥಾಪಿಸಿ ಹಲವರಿಗೆ ಅನ್ನದಾತರಾಗಿದ್ದಾರೆ. 


ಅನಿವಾಸಿ ಭಾರತೀಯನಾಗಿ ತಾನು ಗಳಿಸಿದ್ದನ್ನು ಸಮಾಜ ಸೇವೆಗಾಗಿ ಮೀಸಲಿಡುವ ಇವರು ಸಾಂಸ್ಕೃತಿಕವಾಗಿ ತೊಡಗಿಸಿಕೊಂಡವರಾಗಿದ್ದಾರೆ. ಈಗಾಗಲೇ  ಕಂಬಳಬೆಟ್ಟು ಭಟ್ರೆನ ಮಗಳ್,ಹಾಗೂ ಬಿಡುಗಡೆಗೆ ಸಿದ್ಧವಾಗಿರುವ ನೋನ್ ವೆಜ್ ಚಲನಚಿತ್ರದ ನಿರ್ಮಾಪಕರಾಗಿದ್ದಾರೆ.

Post a Comment

0 Comments